






ಪುತ್ತೂರು: ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಕಾವು ಬಿ ಘಟ ಸಮಿತಿ ವತಿಯಿಂದ ಒಡಿಯೂರು ಶ್ರೀಗಳ ಜನ್ಮದಿನ ಗ್ರಾಮೋತ್ಸವ ಸೇವಾ ಸಂಭ್ರಮ ಕಾರ್ಯಕ್ರಮದ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮವು ದಿನಾಂಕ ಜು.19ರಂದು ಮಾಣಿಯಡ್ಕ ಅಂಗನವಾಡಿಯಲ್ಲಿ ನಡೆಯಿತು.


ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾದ ಮೋನಪ್ಪ ಪೂಜಾರಿ ಕೆರೆಮಾರ್ ಅವರು ದೀಪ ಬೆಳಗಿಸುವುದರ ಮೂಲಕ ಸ್ವಚ್ಛತೆಗೆ ಚಾಲನೆ ನೀಡಿ ಶುಭ ಹಾರೈಸಿದರು.




ಈ ಸಂದರ್ಭದಲ್ಲಿ ಪುತ್ತೂರು ತಾಲೂಕಿನ ಮೇಲ್ವಿಚಾರಕರಾದ ಸವಿತಾ ರೈ, ಕಾವು ಬಿ ಘಟ ಸಮಿತಿಯ ಅಧ್ಯಕ್ಷರಾದ ಶಿವರಾಮ ಪೂಜಾರಿ, ಶಾಲಾ ಶಿಕ್ಷಕಿಯರಾದ ಜಲಜ, ಭವಾನಿ, ಲೆಕ್ಕಪರಿಶೋಧಕಿ ಹರ್ಷಿತ, ಸೇವಾದೀಕ್ಷಿತರಾದ ಸುಮಿತ್ರ ರೈ, ಶ್ರೀಲತಾ, ಪದಾಧಿಕಾರಿಗಳಾದ ಕೇಶವ, ಪ್ರವೀಣ ಹಾಗೂ ಒಡಿಯೂರು ಗ್ರಾಮ ವಿಕಾಸ ಯೋಜನೆಯ ಸದಸ್ಯರು ಉಪಸ್ಥಿತರಿದ್ದರು.










