






ನಿಡ್ಪಳ್ಳಿ; ದ.ಕ ಜಿಲ್ಲಾ ಪೊಲೀಸ್, ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಸಂಪ್ಯ ಇವರ ವತಿಯಿಂದ ಮಾದಕ ದ್ರವ್ಯಗಳ ದುಷ್ಪರಿಣಾಮದ ಬಗ್ಗೆ ಪೇರಲ್ತಡ್ಕ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅರಿವು ಕಾರ್ಯಕ್ರಮ ಜು.17 ರಂದು ನಡೆಯಿತು.


ಬೆಟ್ಟಂಪಾಡಿ ಬೀಟ್ ಪೊಲೀಸ್ ಮಧು ಹಾಗೂ ಕಾನ್ ಸ್ಟೇಬಲ್ ವೆಂಕಪ್ಪ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾದಕ ದ್ರವ್ಯ ಸೇವನೆಯಿಂದ ಉಂಟಾಗಬಹುದಾದ ದುಷ್ಪರಿಣಾಮ ಮತ್ತು ಸೈಬರ್ ವಂಚನೆ, ಪೋಕ್ಸೋ ಕಾಯಿದೆ, ಮಕ್ಕಳ ಸುರಕ್ಷತೆ, 112 ಸಹಾಯವಾಣಿ, ಮುಂತಾದ ವಿಷಯಗಳ ಕುರಿತು ಪೋಷಕರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು. ಇಂತಹ ಪ್ರಕರಣಗಳಿಂದ ಯಾವ ರೀತಿ ಮುಂಜಾಗ್ರತಾ ಕ್ರಮ ವಹಿಸಬೇಕು, ವಿದ್ಯಾರ್ಥಿ ಜೀವನದಲ್ಲಿ ಕಂಡ ಕನಸಿನಂತೆ ಯಶಸ್ವಿಯಾಗಿ ಗುರಿ ಸಾಧಿಸಲು ಮಕ್ಕಳು ಸಮಾಜಕ್ಕೆ ,ದೇಶಕ್ಕೆ ಉತ್ತಮ ಪ್ರಜೆಯಾಗಿ ರೂಪಗೊಳ್ಳಲು ಶಿಕ್ಷಕರ ಮತ್ತು ಪೋಷಕರ ಜವಾಬ್ದಾರಿ ಮುಂತಾದ ವಿಷಯಗಳನ್ನು ಸವಿವರವಾಗಿ ಹೇಳಿದರು.



ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷರಾದ ತುಳಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕರಾದ ಜಾನಕಿ. ಕೆ ಸ್ವಾಗತಿಸಿದರು.ಹಿರಿಯ ಶಿಕ್ಷಕಿ ಯಶೋಧ ವಂದಿಸಿದರು. ವಿಜ್ಞಾನ ಶಿಕ್ಷಕ ಬಾಲಕೃಷ್ಣ. ಕೆ ಕಾರ್ಯಕ್ರಮ ನಿರೂಪಿಸಿದರು. ಜಿಪಿಟಿ ಶಿಕ್ಷಕಿ ಲಕ್ಷ್ಮೀದೇವಿ ಬಿ ಎನ್,ಗೌರವ ಶಿಕ್ಷಕಿಯರಾದ ಮಮತಾ, ಸುಮ್ಮಯ್ಯ ಸಹಕರಿಸಿದರು.










