ಗಾಂಧೀಜಿ ಪ್ರತಿಮೆ ಅನಾವರಣ : ಪೋಷಕರ ಸಭೆ

0

ಪುತ್ತೂರು: ಕೋಡಿoಬಾಡಿ ಗ್ರಾಮದ ಶಾಂತಿನಗರ ಸರಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪ್ರತಿಮೆ ಅನಾವರಣ ಕಾರ್ಯಕ್ರಮದ ಪೂರ್ವತಯಾರಿ ಸಭೆ ಮತ್ತು ಪೋಷಕರ ಸಭೆಯು ಜು.22 ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.


  ಆ.3ರಂದು ಶಾಂತಿನಗರ ಪ್ರೌಢ ಶಾಲೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪ್ರತಿಮೆ ಅನಾವರಣ ಕಾರ್ಯಕ್ರಮ ನಡೆಯಲಿದ್ದು, ಇದರ ಪೂರ್ವಭಾವಿಯಾಗಿ ಪೋಷಕರ ಸಭೆಯು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಪ್ರಕಾಶ್ ಗೌಡ ನೆಕ್ಕಿಲಾಡಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಧನಲಕ್ಷ್ಮೀ ಯವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿ, ಪ್ರಥಮ ಸಂಕಲನಾತ್ಮಕ ಪರೀಕ್ಷೆಯ ತಯಾರಿಯಲ್ಲಿ ಪೋಷಕರ ಜವಾಬ್ದಾರಿಗಳು ಹಾಗೂ ಮಳೆಗಾಲದಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಗಮನಿಸಬೇಕಾದ ವಿಷಯದ ಬಗ್ಗೆ ತಿಳಿಸಿದರು.


 ಎಸ್ ಡಿ ಯಂ ಸಿ ಅಧ್ಯಕ್ಷ ಪ್ರಕಾಶ್ ಗೌಡ ಮಾತನಾಡಿ ಕಾರ್ಯಕ್ರಮದ ತಯಾರಿ, ಜವಾಬ್ದಾರಿ ಹಂಚಿಕೆ ಹಾಗೂ ನಿರ್ವಹಿಸಬೇಕಾದ ಕೆಲಸ ಕಾರ್ಯಗಳ ಬಗ್ಗೆ ತಿಳಿಸಿ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಕೋರಿದರು.
 ವಿದ್ಯಾರ್ಥಿನಿಯರಾದ ಹೃತಿಕಾ, ಗೌತಮಿ, ಸೋಕ್ಷಾ ಹಾಗೂ ಭವಿಕ್ಷಾ ರವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಎಸ್ ಡಿ ಯಂ ಸಿ ಸದಸ್ಯರಾದ ಆದಂ ಕೋಡಿoಬಾಡಿ, ರಾಜೇಶ್ ಶಾಂತಿನಗರ, ಉಷಾ ಬೆಳ್ಳಿಪ್ಪಾಡಿ, ಉಷಾ ಕಾರ್ನೋಜಿ, ತುಳಸಿ ಬೆಳ್ಳಿಪ್ಪಾಡಿ  ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಸಹಶಿಕ್ಷಕಿ ಜ್ಯೋತಿರಾಣಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಹಶಿಕ್ಷಕರು, ಅಕ್ಷರ ದಾಸೋಹ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here