ಕಲ್ಲಾರೆ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯ ಆಮಂತ್ರಣ ಬಿಡುಗಡೆ

0

ಪುತ್ತೂರು: ಕಲ್ಲಾರೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ಕಲಾ ಮಂಟಪದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಮತ್ತು ವಿಶ್ವಹಿಂದು ಪರಿಷದ್, ಮಾತೃ ಮಂಡಳಿ ಪುತ್ತೂರು ನೇತೃತ್ವದಲ್ಲಿ ಆ.21ರಂದು ನಡೆಯಲಿರುವ 52ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯ ಆಮಂತ್ರಣ ಪತ್ರವನ್ನು ಜು.23ರಂದು ಬಿಡುಗಡೆಗೊಳಿಸಲಾಯಿತು.


ಕಲ್ಲಾರೆ ಶ್ರೀ ಗುರುರಾಘವೇಂದ್ರ ಸ್ವಾಮಿ ಮಠದ ಅಧ್ಯಕ್ಷ ಯು.ಪೂವಪ್ಪ ಅವರು ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು. ಈ ಸಂದರ್ಭ ಮಠದ ಪ್ರಧಾನ ಅರ್ಚಕ ವೇ ಮೂ ರಾಘವೇಂದ್ರ ಉಡುಪ, ಪೂಜಾ ಸಮಿತಿಯ ಪ್ರಮುಖರಾದ ವೀಣಾ ಕೊಳತ್ತಾಯ, ಪ್ರೇಮಲತಾ ರಾವ್, ವತ್ಸಲರಾಜ್ಞಿ, ಗೌರಿ ಬನ್ನೂರು, ಮಲ್ಲಿಕಾ ಉಡುಪ, ಅನುಪಮಾ, ಸುಧಾ, ವಸಂತಿ, ರೇಣುಕಾ, ರೂಪ ಕುದ್ದಣ್ಣಾಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here