







ಕಡಬ:ಸುಳ್ಯ ಠಾಣಾ ವ್ಯಾಪ್ತಿಯ ನಿವಾಸಿಯಾಗಿರುವ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಕಡಬ ನಿವಾಸಿ ಯುವಕನೋರ್ವನನ್ನು ಸುಳ್ಯ ಪೊಲೀಸರು ಬಂಧಿಸಿದ್ದಾರೆ.


ಧನುಷ್ ಬಂಧಿತ ಆರೋಪಿ. ಅಪ್ರಾಪ್ತ ಪ್ರಾಯದ ತನ್ನ ಮಗಳು ಮೇ 07ರಂದು ಮಂಗಳೂರಿಗೆ ಕೆಲಸಕ್ಕಾಗಿ ಹೋಗುತ್ತಿರುವುದಾಗಿ ಮನೆಯಿಂದ ತೆರಳಿದವಳು ಆ ಬಳಿಕ ಮನೆಗೆ ಹಿಂತಿರುಗದೇ ಕಾಣೆಯಾಗಿರುವುದಾಗಿ ಆಕೆಯ ತಾಯಿ ಮೇ 11ರಂದು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದರು.ತನಿಖೆ ನಡೆಸಿದ ಪೊಲೀಸರು, ಕಾಣೆಯಾಗಿದ್ದ ಬಾಲಕಿಯನ್ನು ಬು.22ರಂದು ಪತ್ತೆ ಮಾಡಿದ್ದರು. ಆರೋಪಿ ಧನುಷ್ (18ವ.)ಎಂಬಾತ ತನ್ನನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜಜ್ಯ ನಡೆಸಿರುವುದಾಗಿ ಬಾಲಕಿ ನೀಡಿದ ಹೇಳಿಕೆಯ ಮೇರೆಗೆ, ಪ್ರಕರಣದಲ್ಲಿ ಕಲಂ 64(2)(m) BNS, ಕಲಂ 5(1), 6 POCSO ಕಾಯ್ದೆಯನ್ನು ಹೆಚ್ಚುವರಿಯಾಗಿ ಅಳವಡಿಸಲಾಗಿದ್ದು ಆರೋಪಿತನನ್ನು ದಸ್ತಗಿರಿ ಮಾಡಿ ವಿಚಾರಣೆ ನಡೆಸಲಾಗುತ್ತಿದ್ದು,ಮುಂದಿನ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.













