






ಪುತ್ತೂರು : ಸವಣೂರು ವಿದ್ಯಾರಶ್ಮಿ ವಿದ್ಯಾಲಯದಲ್ಲಿ 2026-27 ನೇ ಸಾಲಿನ ಪೋಷಕರ ಸಭೆ ನಡೆಯಿತು. ಶಾಲಾ ಸಂಚಾಲಕ ಸವಣೂರು ಸೀತಾರಾಮ ರೈಯವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ ಆಡಳಿತ ಮಂಡಳಿ, ಶಿಕ್ಷಕರು ಪೋಷಕರು ಮತ್ತು ವಿದ್ಯಾರ್ಥಿಗಳು ಜೊತೆ ಸೇರಿದಾಗ ಮಾತ್ರ ವಿದ್ಯಾಸಂಸ್ಥೆ ಸರ್ವಾಂಗೀಣ ಬೆಳವಣಿಗೆ ಆಗಲು ಸಾಧ್ಯ ಎಂದು ಹೇಳಿದರು.


ಮುಖ್ಯ ಅತಿಥಿಯಾಗಿದ್ದ ಸುಳ್ಯ ಸರಕಾರಿ ಪದವಿ ಪೂರ್ವ ಕಾಲೇಜು ಉಪಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯರವರು ಪೋಷಕರನ್ನು ಕುರಿತು ಸೋಲಿನಲ್ಲೂ ಬದುಕನ್ನು ಹೇಗೆ ಕಟ್ಟಿ ಕೊಳ್ಳುವುದು ಅನ್ನುವುದನ್ನು ಪೋಷಕರು ಮತ್ತು ಶಿಕ್ಷಕರು ಒಟ್ಟು ಕೂಡಿ ಕಲಿಸೋಣ ಎಂದು ನುಡಿದರು.



ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದು, ಉಪಾಧ್ಯಕ್ಷರಾಗಿ ಡಾ.ಜೀವನ್ ಪ್ರಕಾಶ್ ರೈ ಆಯ್ಕೆ ಆಗಿರುತ್ತಾರೆ. ಉಳಿದಂತೆ ಅಶ್ರಫ್ ಎಂ. (ಪಿಯುಸಿ ವಿಭಾಗ), ನಸೀಮ (ಹೈಸ್ಕೂಲ್ ವಿಭಾಗ). ಎಸ್ ಇ ಅಬ್ದುಲ್ ಸೋಂಪಾಡಿ (ಪ್ರಾಥಮಿಕ ವಿಭಾಗ) ಮತ್ತು ಮೇನಕ (ಕೆ ಜಿ ವಿಭಾಗ) ಇವರು ಸದಸ್ಯರುಗಳಾಗಿ ಆಯ್ಕೆಯಾದರು.
ಸಂಸ್ಥೆಯ ಆಡಳಿತಾಧಿಕಾರಿ ಅಶ್ವಿನ್ ಎಲ್ ಶೆಟ್ಟಿ, ಟ್ರಸ್ಟಿಗಳಾದ ಎನ್ ಸುಂದರ್ ರೈ, ರಶ್ಮಿ ಅಶ್ವಿನ್ ಶೆಟ್ಟಿ, ಮತ್ತು 2025-26ನೇ ಸಾಲಿನ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ತಾರನಾಥ ಕಾಯರ್ಗ , ಪ್ರಾಂಶುಪಾಲೆ ಶಶಿಕಲಾ ಎಸ್ ಆಳ್ವ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕಿ ಚೇತನಾ ನಿರೂಪಿಸಿ, ಕನ್ನಡ ಉಪನ್ಯಾಸಕಿ ಜ್ಯೋತಿ ಕುಮಾರಿ ಸ್ವಾಗತಿಸಿ, ಶಿಕ್ಷಕಿ ಲಿಖಿತ ಎಂ.ಎನ್ ವಂದಿಸಿದರು. ಪಿಯುಸಿ ವಿಭಾಗದ ವಿಧಿಶ ಮತ್ತು ಬಳಗದವರು ಪ್ರಾರ್ಥನೆ ಮತ್ತು ೮ನೆ ತರಗತಿಯ ಮೋಕ್ಷ ಕೆ ಯು ಸಂವಿಧಾನ ಪೀಠಿಕೆ ವಾಚಿಸಿದರು.










