‘ಬಾರಿಸು ಕನ್ನಡ ಡಿಂಡಿಮವ’ ಸಂಸ್ಥಾಪಕ ಚಿದಾನಂದ ಕಾಮತ್ 9ನೇ ಪುಣ್ಯಸ್ಮರಣೆ

0

ಪರ್ಲಡ್ಕ: ‘ಬಾರಿಸು ಕನ್ನಡ ಡಿಂಡಿಮವ’ ಸಂಸ್ಥಾಪಕ ದಿ. ಚಿದಾನಂದ ಕಾಮತ್ ಅವರ 9ನೇ ವರ್ಷದ ಪುಣ್ಯಸ್ಮರಣೆಯನ್ನು ಜು.24ರಂದು ಡಿಂಡಿಮವ ಬಳಗದಿಂದ ಪರ್ಲಡ್ಕದ ಅವರ ಸ್ವಗೃಹ ‘ಕಲಾ ಸ್ಪೂರ್ತಿ’ಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಚಿದಾನಂದ ಕಾಮತ್ ಅವರ ಪತ್ನಿ ಅನಿತಾ ಕಾಮತ್ ದೀಪ ಬೆಳಗಿಸುವುದರೊಂದಿಗೆ ಆರಂಭಿಸಿದರು. ರಾಮಚಂದ್ರ ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ಡಿಂಡಿಮ ತಂಡದ ಸದಸ್ಯರನ್ನು ಸ್ವಾಗತಿಸಿದರು. ಬಳಿಕ ಎಲ್ಲರೂ ಚಿದಾನಂದ ಕಾಮತ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.

ನಿರೂಪಕಿ ಡಾ. ಕೃತಿಕಾ ಐತಾಳ್ ನುಡಿನಮನ ಸಲ್ಲಿಸಿ, ಕಾಮತ್ ಅವರು ತಂಡದ ಮಕ್ಕಳಿಗೆ ಸಂಸ್ಕೃತಿಯ ಜೊತೆಗೆ ಸಂಸ್ಕಾರ ನೀಡಿ ಸರಿದಾರಿಯಲ್ಲಿ ನಡೆಸಿದ ಮಹಾನುಭಾವರು ಎಂದು ಸ್ಮರಿಸಿದರು. ವಸಂತಿ ಆರ್. ಐತಾಳ್, ವತ್ಸಲಾ ಪಿ. ಶೆಟ್ಟಿ, ಪ್ರೇಮ ಸಾಮೆತ್ತಡ್ಕ, ಶೀಲಾ ಜಯರಾಮ್ ಬಡಾವು, ಜ್ಯೋತಿ ಜನಾರ್ಧನ ಅವರು ಕಾಮತರ ಒಡನಾಟ, ಸಮಯಪ್ರಜ್ಞೆ ಮತ್ತು ಮಕ್ಕಳ ಮೇಲಿನ ಪ್ರೀತಿಯನ್ನು ನೆನಪಿಸಿಕೊಂಡರು.ಸುದರ್ಶನ ಮುರ ಅವರು ಮಾತನಾಡಿ, ಇಂದು ಮಕ್ಕಳು ಈ ಮಟ್ಟಕ್ಕೆ ಬೆಳೆಯಲು ಕಾರಣ ಕಾಮತರು. ಅವರು ನೆಟ್ಟ ಗಿಡದ ಫಸಲನ್ನು ನಾವೀಗ ಅನುಭವಿಸುತ್ತಿದ್ದೇವೆ ಎಂದರು. ನಾರಾಯಣ ಕುಕ್ಕುಪುಣಿ ವಂದಿಸಿದರು.

LEAVE A REPLY

Please enter your comment!
Please enter your name here