​ಕುಂಬ್ರ ಮೊಂತೆರೋ ಸ್ವೀಟ್ಸ್‌ನ ಮೆಲ್ವಿನ್ ಮೊಂತೆರೊಗೆ ಪುತ್ತೂರು ತಾಲೂಕು ಮಟ್ಟದ ಅತ್ಯುತ್ತಮ ನಂದಿನಿ ಡೀಲರ್ ಗೌರವ

0

​ಪುತ್ತೂರು : ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿಯಮಿತ  ವತಿಯಿಂದ ನೀಡಲಾಗುವ 2025-26 ನೇ ಸಾಲಿನ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಕ್ಷೇತ್ರದಲ್ಲಿ, ಕುಂಬ್ರದ ಮೊಂತೆರೋ ಸ್ವೀಟ್ಸ್ ಮಾಲೀಕರಾದ ಮೆಲ್ವಿನ್ ಮೋಂತೆರೊ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

​ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರ ಸಂಘದ ಅಧಿಕೃತ ನಂದಿನಿ ಡೀಲರ್ ಆಗಿರುವ ಮೆಲ್ವಿನ್ ಮೋಂತೆರೊ ಅವರನ್ನು 2025-26 ನೇ ಸಾಲಿನಲ್ಲಿ ಪುತ್ತೂರು ತಾಲೂಕು ಮಟ್ಟದ ಗ್ರಾಮೀಣ ಪ್ರದೇಶದ ಅತ್ಯುತ್ತಮ ನಂದಿನಿ ಡೀಲರ್ ಎಂದು ಗುರುತಿಸಿ, ‘ಪ್ರಥಮ ಸ್ಥಾನ’ ನೀಡಿ ಒಕ್ಕೂಟದ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು. ಗ್ರಾಮೀಣ ಭಾಗದಲ್ಲಿ ನಂದಿನಿ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆ ಹಾಗೂ ಹಾಲಿನ ಉತ್ಪನ್ನಗಳನ್ನು ಪರಿಣಾಮಕಾರಿಯಾಗಿ ತಲುಪಿಸುವಲ್ಲಿ ಅವರು ತೋರಿದ ನಿರಂತರ ಶ್ರಮವನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗಿದೆ.

​ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರಾದ ರವಿರಾಜ್ ಹೆಗಡೆ, ಉಪಾಧ್ಯಕ್ಷರಾದ ಉದಯ ಎಸ್. ಕೋಟ್ಯಾನ್, ನಿರ್ದೇಶಕರಾದ ಎಸ್. ಬಿ. ಜಯರಾಮ್ ರೈ, ಜಗನ್ನಾಥ್ ಶೆಟ್ಟಿ, ವ್ಯವಸ್ಥಾಪಕ ನಿರ್ದೇಶಕರಾದ ಜಯಕುಮಾರ್, ವ್ಯವಸ್ಥಾಪಕರಾದ (ಶೇಖರಣೆ/ತಾಂತ್ರಿಕ) ರವಿ ರಾಜು ಉಡುಪ, ಉಪ ವ್ಯವಸ್ಥಾಪಕರಾದ (ಮಾರುಕಟ್ಟೆ) ಸಚಿನ್ ಸಿ. ಹಾಗೂ ಮಾರುಕಟ್ಟೆ ಅಧಿಕಾರಿಯಾದ ಸದಾಶಿವ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದು, ಮೆಲ್ವಿನ್ ಮೋಂತೆರೊ ಅವರ ಈ ಸಾಧನೆಗೆ ಶ್ಲಾಘನೆ ವ್ಯಕ್ತಪಡಿಸಿ ಶುಭ ಹಾರೈಸಿದರು.

​6 ನೇ ಬಾರಿಗೆ ಪ್ರಶಸ್ತಿ
ಮೆಲ್ವಿನ್ ಮೊಂತೆರೋರವರು ಕುಂಬ್ರ ವರ್ತಕರ ಸಂಘದ ಮಾಜಿ ಅಧ್ಯಕ್ಷರಾಗಿದ್ದು, ಪ್ರಸ್ತುತ ಕೆದಂಬಾಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರೂ ಆಗಿರುವ ಇವರು ಕುಂಬ್ರದ ನಿಶಿತಾ ಕಾಂಪ್ಲೆಕ್ಸ್‌ನಲ್ಲಿ ಕಳೆದ 24 ವರ್ಷಗಳಿಂದ ಮೊಂತೇರೋ ಸ್ವೀಟ್ಸ್ ಮತ್ತು ಬೇಕರಿ ನಡೆಸುತ್ತಿದ್ದಾರೆ. ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟದಲ್ಲಿ ಸತತ 6 ನೇ ಬಾರಿಗೆ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಮೆಲ್ವಿನ್ ಮೊಂತೇರೋರವರು ಕಳೆದ 16 ವರ್ಷಗಳಿಂದ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟಗಾರರಾಗಿದ್ದು, ಕಳೆದ 6 ವರ್ಷಗಳಿಂದ ಅತ್ಯುತ್ತಮ ಡೀಲರ್ ಪ್ರಶಸ್ತಿ ಪಡೆದುಕೊಂಡು ಬಂದಿದ್ದಾರೆ.

LEAVE A REPLY

Please enter your comment!
Please enter your name here