







ಪುತ್ತೂರು: ಬನ್ನೂರು ನವೋದಯ ಯುವಕ-ಯುವತಿ ಮಂಡಲದ ಗೌರವಾಧ್ಯಕ್ಷರಾದ ಅಂಗಾರ ಪಿ ಅವರಿಗೆ ನವೋದಯ ಯುವಕ-ಯುವತಿ ಮಂಡಲದ ಕಟ್ಟಡದಲ್ಲಿ ಶ್ರದ್ಧಾಂಜಲಿ ಸಭೆ ನಡೆಯಿತು.



ಸಂಘದ ಸದಸ್ಯರು ಅಂಗಾರ ಪಿ ಅವರ ಭಾವಚಿತ್ರಕ್ಕೆ ದೀಪ ಬೆಳಗಿಸಿ ನುಡಿನಮನ ಸಲ್ಲಿಸಿ ಪುಷ್ಪಾಂಜಲಿ ಅರ್ಪಿಸುವ ಮೂಲಕ ಅವರ ದಿವ್ಯಾತ್ಮಕ್ಕೆ ಶ್ರದ್ಧಾಂಜಲಿ ಕೋರಿದರು. ಈ ಸಂದರ್ಭದಲ್ಲಿ ನವೋದಯ ಯುವಕ ಮತ್ತು ಯುವತಿ ಮಂಡಲ ಹಾಗೂ ಮಹಿಳಾ ಮಂಡಲದ ಸದಸ್ಯರು ಉಪಸ್ಥಿತರಿದ್ದರು.














