






ಪುತ್ತೂರು: ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ವಿವಿಧ ಶಾಖೆಗಳ 28 ಮಂದಿ ನೃತ್ಯ ವಿದ್ಯಾರ್ಥಿಗಳ ಭರತನಾಟ್ಯ ನೃತ್ಯ ಪ್ರದರ್ಶನವು ಜು.26 ರಂದು ಉಪ್ಪಿನಂಗಡಿಯ ಕೆಮ್ಮಾರದಲ್ಲಿ ದ್ವಾರಕ ರಿಪ್ರೆಶ್ ಮೆಂಟ್ಸ್ ಮತ್ತು ಸಂತೃಪ್ತಿ ವೆಜ್ ಪುತ್ತೂರು ಇವರ ಸಹಯೋಗದಲ್ಲಿ ನಡೆದ ದೋಸೆ ಮೇಳದ ಸಮಾರೋಪದಲ್ಲಿ ನಡೆಯಿತು.






ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಸಂಚಾಲಕಿ ಶಶಿಪ್ರಭಾ ಅವರ ಮಾರ್ಗದರ್ಶನದಲ್ಲಿ ನೃತ್ಯ ನಿರ್ದೇಶಕ ವಿದ್ವಾನ್ ದೀಪಕ್ ಕುಮಾರ್ ಬಿ ,ನೃತ್ಯ ಗುರುಗಳಾದ ವಿದುಷಿ ಪ್ರೀತಿಕಲಾ ಮತ್ತು ವಿದ್ವಾನ್ ಗಿರೀಶ್ ಕುಮಾರ್ ಅವರ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ಪ್ರದರ್ಶನಗೊಂಡಿತು. ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಾದ ವಿದುಷಿ ಅಪೂರ್ವ ಗೌರಿ, ವಿದುಷಿ ಪ್ರಣಮ್ಯ, ವಿದುಷಿ ವಿಭಾಶ್ರೀ, ವಿದುಷಿ ವಿಧಿ ಎನ್, ಆಕಾಂಕ್ಷ, ಬಾನವಿಕೃಷ್ಣ, ವಿಷ್ಣುಪ್ರಿಯ, ಲಾಸ್ಯ, ಉದೋನ್ಮುಖ ಕಲಾವಿದರಾದ ಮಾತಂಗಿ, ಅಕ್ಷರಿ ಎ, ಅಕ್ಷರಾ, ಆದ್ಯ ಶಾಸ್ತ್ರೀ, ಸನ್ನಿಧಿ, ಅಭಿಜ್ಞಾ, ಹಿಮನೀಶ್, ಮನಿಹಾ, ಜನಿತಾ, ಆದ್ಯ ಕೆ, ಇಶಿಕಾ, ಕೊಕ್ಕಡ ಶಾಖೆಯ ಶ್ರೀಹಿತಾ, ಚಿರಂತನ, ವರ್ಷ, ಸ್ಪರ್ಷ, ದೃತಿ, ಸಪ್ತಮಿ, ಅರ್ಚನ, ಲಿಪಿಕಾ. ನೃತ್ಯದ ವಿದ್ಯಾರ್ಥಿಗಳಿಗೆ ಭಾವನ ಕಲಾ ಆರ್ಟ್ಸ್‌ನ ವಿಘ್ನೇಶ್ ವಿಶ್ವಕರ್ಮ ಪ್ರಸಾದನ ಮಾಡಿದರು. ದ್ವಾ ರಕ ಸಮೂಹ ಸಂಸ್ಥೆಗಳ ಸಹಾಯಕ ನಿರ್ದೇಶಕಿ ಅಶ್ವಿನಿ ಗೋಪಾಲಕೃಷ್ಣ, ಕಾರ್ಯನಿರ್ವಾಹಕ ನಿರ್ದೇಶಕ ಅಮೃತಕೃಷ್ಣ, ಪ್ರತಿಷ್ಟಾನದ ನಿರ್ದೇಶಕಿ ಅಮೃತ ಶಾನ್ ಬೋಗ್ ಕಲಾವಿದರನ್ನು ಗೌರವಿಸಿದರು. ಪ್ರತಿಷ್ಟಾನದ ಕಾರ್ಯದರ್ಶಿ ಗಣರಾಜ್ ಭಟ್ ಕಾರ್ಯಕ್ರಮ ನಿರೂಪಿಸಿದರು.
















