






ಸವಣೂರು: ಬಿಜೆಪಿ ಎಸ್.ಟಿ.ಮೋರ್ಚಾ ಸುಳ್ಯ ಮಂಡಲ ಇದರ ವತಿಯಿಂದ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ನಿವೃತ್ತ ಸೈನಿಕ ಸಂಜೀವ ಗೌಡ ಪಾಲ್ತಾಡಿ ಅವರಿಗೆ ಸೈನಿಕ ನಿಲಯ ಪಾರ್ಲದಲ್ಲಿ ಗೌರವಾರ್ಪಣೆ ಜು.26ರಂದು ನಡೆಯಿತು.


ನಿವೃತ್ತ ಸೈನಿಕರಾದ ಸಂಜೀವ ಗೌಡ ಹಾಗೂ ಪತ್ನಿ ಮನೋರಮಾ ಅವರನ್ನು ಸನ್ಮಾನಿಸಲಾಯಿತು. ಸವಣೂರು ಗ್ರಾ.ಪಂ.ಮಾಜಿ ಸದಸ್ಯ, ಬಿಜೆಪಿ ಶಕ್ತಿ ಕೇಂದ್ರ ಪಾಲ್ತಾಡಿಯ ಸಹ ಪ್ರಮುಖ್ ಭರತ್ ರೈ ಪಾಲ್ತಾಡಿ ಅವರು ಕಾರ್ಗಿಲ್ ವಿಜಯ ದಿವಸ್ ಕುರಿತು ಮಾತನಾಡಿದರು.



ಸುಳ್ಯ ಮಂಡಲ ಎಸ್.ಟಿ.ಮೋರ್ಚಾ ಅಧ್ಯಕ್ಷ ಗಂಗಾಧರ ಪೆರಿಯಡ್ಕ, ಕಾರ್ಯದರ್ಶಿ ಬಾಲಕೃಷ್ಣ ಆಲಂಗಪ್ಪೆ, ಸವಣೂರು ಶಕ್ತಿ ಕೇಂದ್ರದ ಪ್ರಮುಖ್ ಚೇತನ್ ಕುಮಾರ್ ಕೋಡಿಬೈಲು, ಪಾಲ್ತಾಡಿ ಬೂತ್71ರ ಮಾಜಿ ಅಧ್ಯಕ್ಷ ಜಯಪ್ರಶಾಂತ್ ಪಲ್ಲತಡ್ಕ, ಹುಕ್ರಪ್ಪ ನಾಯ್ಕ ಮೊದಲಾದವರಿದ್ದರು. ಬೂತ್ 71ರ ಕಾರ್ಯದರ್ಶಿ ಸವಣೂರು ಗ್ರಾ.ಪಂ.ಮಾಜಿ ಸದಸ್ಯ ತಾರಾನಾಥ ಬೊಳಿಯಾಲ ಸ್ವಾಗತಿಸಿ, ವಂದಿಸಿದರು.










