ಒಳಮೊಗ್ರು ಗ್ರಾಪಂನಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆ

0

ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತ್‌ನಲ್ಲಿ 2026-27 ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ 2025-26 ನೇ ಸಾಲಿನ 15 ನೇ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನಾ ಗ್ರಾಮಸಭೆ ಜು.27 ರಂದು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.

ಪುತ್ತೂರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ತಿಲೋತ್ತಮೆರವರು ಸಭಾಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ 2025-26 ನೇ ಸಾಲಿನಲ್ಲಿ ನಡೆದ ಕಾಮಗಾರಿಗಳ ಪಾರದರ್ಶಕತೆ ಹಾಗೂ ಜವಾಬ್ದಾರಿಯುತ ನಿರ್ವಹಣೆಯ ಕುರಿತು ಚರ್ಚಿಸಲಾಯಿತು.


ಸಾಮಾಜಿಕ ಲೆಕ್ಕ ಪರಿಶೋಧನಾ ತಾಲೂಕು ವ್ಯವಸ್ಥಾಪಕರಾದ ಜಯಲಕ್ಷ್ಮೀಯವರು ಸಭೆಗೆ ಮಾಹಿತಿ ನೀಡಿದರು. ನರೇಗಾ ಕಾಮಗಾರಿಗಳ ಬಗ್ಗೆ ತಾಲೂಕು ಸಂಯೋಜಕರಾದ ಭರತ್‌ರಾಜ್ ಕೆ.ರವರು ಮಾಹಿತಿ ನೀಡಿದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಸುಭಾಶ್ಚಂದ್ರ ಕೆ.ರವರು 15 ನೇ ಹಣಕಾಸು ಯೋಜನೆಯ ಬಗ್ಗೆ ಹಾಗೂ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ನರೇಗಾ ಕಾಮಗಾರಿಗಳ ಬಗ್ಗೆ ಮಾಹಿತಿ ನೀಡಿದರು.


ಈ ಸಂದರ್ಭದಲ್ಲಿ ನರೇಗಾ ಸಿವಿಲ್ ಇಂಜಿನಿಯರ್ ಶ್ರೀಲಕ್ಷ್ಮೀ, ತೋಟಗಾರಿಕಾ ಇಲಾಖಾ ಇಂಜಿನಿಯರ್ ಆಕಾಂಕ್ಷ ವಿವಿಧ ಮಾಹಿತಿ ನೀಡಿದರು. ಸಭೆಯಲ್ಲಿ ಗ್ರಾಪಂ ಮಾಜಿ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಮಾಜಿ ಸದಸ್ಯರುಗಳಾದ ಮಹೇಶ್ ರೈ ಕೇರಿ, ಶೀನಪ್ಪ ನಾಯ್ಕ ಮುಡಾಲ, ಬಿ.ಸಿ ಚಿತ್ರಾ, ಸುಂದರಿ, ವಿನೋದ್ ಶೆಟ್ಟಿ ಮುಡಾಲ, ಸಾಮಾಜಿಕ ಕಾರ್ಯಕರ್ತರಾದ ರಾಜೇಶ್ ರೈ ಪರ್ಪುಂಜ, ಕೆಪಿಎಸ್ ಕಾರ್ಯಾಧ್ಯಕ್ಷ ರಕ್ಷಿತ್ ರೈ ಮುಗೇರು ಹಾಗೇ ಸಂಜೀವಿನಿ ಒಕ್ಕೂಟದ ಚಂದ್ರಿಕಾ ರೈ, ಸುನೀತಾ ಸೇರಿದಂತೆ ಸದಸ್ಯರುಗಳು, ನರೇಗಾ ಫಲಾನುಭವಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಗ್ರಾಪಂ ಕಾರ್ಯದರ್ಶಿ ಜಯಂತಿ ಕೆ.ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿಗಳಾದ ಜಾನಕಿ, ಗುಲಾಬಿ, ಕೇಶವ, ಲೋಕನಾಥ, ಮೋಹನ್ ಕೆ.ಪಿ ಸಹಕರಿಸಿದ್ದರು.


ಒಳಮೊಗ್ರು ಗ್ರಾಪಂನಲ್ಲಿ 2025-26 ನೇ ಸಾಲಿನಲ್ಲಿ ಒಟ್ಟು 54 ಕಾಮಗಾರಿಗಳು ಆಗಿದ್ದು ರೂ.40,729 ಸಾಮಾಗ್ರಿ ವೆಚ್ಚ ಹಾಗೇ 4310 ಮಾನವ ದಿನಗಳು ಆಗಿದೆ.

LEAVE A REPLY

Please enter your comment!
Please enter your name here