






ಆಲಂಕಾರು: ಜೇಸಿಐ ಆಲಂಕಾರು ಘಟಕದ ಸದಸ್ಯರ ಕುಟುಂಬ ಸಮ್ಮಿಲನ ಹಾಗೂ ಈ ವರ್ಷದ ಆಟಿಕೂಟ ಕಾರ್ಯಕ್ರಮ ಆಲಂಕಾರು ಸಿ.ಎ ಬ್ಯಾಂಕಿನ ಸಭಾಂಗಣದಲ್ಲಿ ನಡೆಯಿತು.


ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷ ಮಹೇಶ್ ಪಾಟಾಳಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ದುರ್ಗಾಂಬ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ರೂಪಾ ಎಂ.ರೈ ಅವರು ಆಟಿ ತಿಂಗಳ ಮಹತ್ವ, ಈ ತಿಂಗಳ ವಿಶೇಷ ಆಚರಣೆಗಳು, ಹಿಂದಿನ ಕಾಲದ ಜೀವನ ಪದ್ಧತಿಗಳ ಬಗ್ಗೆ ಉಪನ್ಯಾಸ ನೀಡಿದರು. ಇನ್ನೋರ್ವ ಮುಖ್ಯ ಅತಿಥಿ ಜೇಸಿಐ ಆಲಂಕಾರಿನ ಪೂರ್ವಾಧ್ಯಕ್ಷ ನವೀನ್ ಮಾಯಿಲ್ಗ ಮಾತನಾಡಿ, ಘಟಕದಲ್ಲಿ ನಡೆಸಿಕೊಂಡು ಬಂದಿರುವ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು.



ಜೇಸಿ ಕುಟುಂಬ ಸದಸ್ಯರಿಗಾಗಿ ವಿವಿಧ ಮನೋರಂಜನಾ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ತಾಯಂದಿರ ದಿನಾಚರಣೆಯ ಅಂಗವಾಗಿ ಘಟಕದಲ್ಲಿ ಏರ್ಪಡಿಸಲಾಗಿದ್ದ ತಾಯಿಯೊಂದಿಗೆ ನಾನು ಭಾವಚಿತ್ರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಅಭಿನಂದಿಸಲಾಯಿತು. ಈ ಬಹುಮಾನದ ಪ್ರಾಯೋಜಕತ್ವವನ್ನು ಘಟಕದ ಪೂರ್ವಾಧ್ಯಕ್ಷ ಗಣೇಶ್ ಕಟ್ಟಪುಣಿ ನೀಡಿ ಸಹಕರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಜೇಸಿ ಸದಸ್ಯರು ತಮ್ಮ ಮನೆಯಲ್ಲಿ ತಯಾರಿಸಿಕೊಂಡು ಬಂದಿದ್ದ ಸುಮಾರು 25ಕ್ಕೂ ಹೆಚ್ಚಿನ ಖಾದ್ಯಗಳೊಂದಿಗೆ ಸಹ ಭೋಜನ ಸವಿದರು.
ಕಾರ್ಯಕ್ರಮದಲ್ಲಿ ವಲಯಾಧಿಕಾರಿ ವಿನೀತ್ ಶಗ್ರಿತ್ತಾಯ, ನಿಕಟ ಪೂರ್ವಾಧ್ಯಕ್ಷ ಗುರುರಾಜ್ ರೈ, ಮಹಿಳಾ ಜೇಸಿ ಅಧ್ಯಕ್ಷೆ ಕೃತಿಕಾ ಟಿ.ರೈ, ಜೆಜೇಸಿ ಅಧ್ಯಕ್ಷೆ ಕೀರ್ತಿ ಶೆಟ್ಟಿ, ಜೇಸಿಐ ಆಲಂಕಾರು ಘಟಕದ ಸ್ಥಾಪಕ ಪ್ರಶಾಂತ್ ಕುಮಾರ್ ರೈ, ಶಾಂತಿನಗರ ಶಾಲೆಯ ಮುಖ್ಯ ಶಿಕ್ಷಕ ಜಯಪ್ರಕಾಶ್ ರೈ, ಘಟಕದ ಸ್ಥಾಪಕಾಧ್ಯಕ್ಷ ಜನಾರ್ದನ್ ಬಿ.ಎಲ್., ಪೂರ್ವಾಧ್ಯಕ್ಷರುಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಸದಸ್ಯ ಪುರಂದರ ಕೆ. ಜೇಸಿವಾಣಿ ವಾಚಿಸಿದರು. ಕಾರ್ಯಕ್ರಮ ನಿರ್ದೇಶಕಿ ಶ್ರುತಿ ಪ್ರಸಾದ್ ರೈ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಅಧ್ಯಕ್ಷ ಮಹೇಶ್ ಪಾಟಾಳಿ ಸ್ವಾಗತಿಸಿ, ಕಾರ್ಯದರ್ಶಿ ಜನಾರ್ದನ್ ಸುರ್ಯ ವಂದಿಸಿದರು. ಪೂರ್ವಾಧ್ಯಕ್ಷ ಗುರುಕಿರಣ್ ಶೆಟ್ಟಿ ಸಹಕರಿಸಿದರು.










