






ಪುತ್ತೂರು: ಶ್ರೀ ಮಹಾಲಿಂಗೇಶ್ವರ ಐಟಿಐಯ 2024-26 ಬ್ಯಾಚ್ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭವು ಸಂಸ್ಥೆಯ ಕೌಶಲ್ಯ ಸಭಾಭವನದಲ್ಲಿ ನಡೆಯಿತು.


ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮೆಸ್ಕಾಂ ಪುತ್ತೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಚಂದ್ರ ಎ, ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಇಲೆಕ್ಟ್ರಾನಿಕ್ಸ್ ವಿಭಾಗದ ಪ್ರಾಧ್ಯಾಪಕರಾದ ವೆಂಕಟೇಶ ಕೆ ಭಾಗವಹಿಸಿದರು. ಸಂಸ್ಥೆಯ ಸಂಚಾಲಕ ಯು.ಪಿ ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು.



ಸಂಸ್ಥೆಯ ನಿರ್ದೇಶಕರಾದ ಜಯರಾಮ ಚಿಲ್ತಡ್ಕ, ಉಮೇಶ್ ಎಂ, ವಿಶ್ರಾಂತ ಪ್ರಾಚಾರ್ಯ ಭವಾನಿ ಗೌಡ , ಪ್ರಾಚಾರ್ಯ ಪ್ರಕಾಶ್ ಪೈ, ತರಬೇತಿ ಅಧಿಕಾರಿ ವಸಂತಿ, ಅಧ್ಯಾಪಕ, ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.










