







ವಿಟ್ಲ: ಜನಪ್ರಿಯ ಗ್ರೂಪ್ ಆಫ್ ಇನ್ಸ್ಟಿಟ್ಯೂಟ್ಸ್ ವತಿಯಿಂದ ವಿಟ್ಲ ಪೊಲೀಸ್ ಠಾಣೆಯ ಆಡಳಿತಾತ್ಮಕ ಕಾರ್ಯಗಳಿಗೆ ನೆರವಾಗುವ ಉದ್ದೇಶದಿಂದ ಕಲರ್ ಪ್ರಿಂಟರ್ ಅನ್ನು ಕೊಡುಗೆಯಾಗಿ ನೀಡಲಾಯಿತು.


ಜನಪ್ರಿಯ ಶಾಲೆಯ ನಿರ್ದೇಶಕರಾದ ನೌಶೀನ್ ಬದ್ರಿಯಾ, ಪ್ರಾಂಶುಪಾಲರಾದ ಲಿಬಿನ್ ಝೇವಿಯರ್ ಹಾಗೂ ಆಡಳಿತಾಧಿಕಾರಿ ಸಫ್ವಾನ್ ಪಿಲಿಕಲ್ ಅವರು ವಿಟ್ಲ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಪ್ರಕಾಶ್ ದೇವಾಡಿಗ ಅವರನ್ನು ಭೇಟಿಯಾಗಿ ಕಲರ್ ಪ್ರಿಂಟರ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪೊಲೀಸ್ ಠಾಣೆಯ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.













