ಆ.2 ರಂದು ಆಲಂಕಾರು ವಲಯ ಬಂಟರ ಸಂಘದ ಆಟಿದಕೂಟ,ಬಂಟರ ಸಮಾವೇಶ, ವಿದ್ಯಾರ್ಥಿ ವೇತನ,ಸಾದಕರಿಗೆ ಸನ್ಮಾನ,ಕೃಷಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

0

ಆಲಂಕಾರು: ಆಲಂಕಾರು ವಲಯ ಬಂಟರ ಸಂಘ (ರಿ.), ಯುವ ಬಂಟರ ಸಂಘ ,ಮಹಿಳಾ ಬಂಟರ ಸಂಘ ಆಲಂಕಾರು ಇದರ ಆಶ್ರಯದಲ್ಲಿ ಆಟಿದ ಕೂಟ, ಬಂಟರ ಸಮಾವೇಶ, ವಿದ್ಯಾರ್ಥಿವೇತನ ವಿತರಣೆ, ಸಾಧಕರಿಗೆ ಸನ್ಮಾನ ಮತ್ತು ಕಲ್ಲಂಗಳ ಗುತ್ತು ವಾಸಪ್ಪ ಪೆರ್ಗಡೆ ಕೃಷಿ ಪ್ರಶಸ್ತಿ ಪ್ರಧಾನ, ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆ.2 ರಂದು ದೀನ ದಯಾಳು’ ರೈತ ಸಭಾ ಭವನ ಆಲಂಕಾರಿನಲ್ಲಿ ನಡೆಯಲಿದೆ.


ಆಟಿದ ಕೂಟದ ಉದ್ಘಾಟನೆಯನ್ನು ಬೆಳಿಗ್ಗೆ 9:00 ಗಂಟೆಗೆ ಶತಾಯುಷಿ ಅಂತಕ್ಕೆ ಎನ್. ಶೆಟ್ಟಿ ಕೇವಳ ಪಟ್ಟೆ ಉದ್ಘಾಟಿಸಲಿದ್ದು ನಂತರ ಸಾಂಸ್ಕೃತಿಕ ಕಾರ್ಯಕ್ರಮ, ಸಭಾಕಾರ್ಯಕ್ರಮ ನಡೆಯಲಿದೆ. ಸಭೆಯ ಅಧ್ಯಕ್ಷತೆಯನ್ನು ಆಲಂಕಾರು ವಲಯ ಬಂಟರ ಸಂಘದ ಅಧ್ಯಕ್ಷರಾದ ಪ್ರಶಾಂತ ರೈ ಮನವಳಿಕೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಪುತ್ತೂರು ತಾಲೂಕು ಬಂಟರ ಸಂಘ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಸಹಕಾರ ರತ್ನ ಶ್ರೀ ಎ. ನವೀನ್ ಭಂಡಾರಿ,ಭಾರತೀಯ ರಿಸರ್ವ್ ಬ್ಯಾಂಕ್ ಮಾಜಿ ನಿರ್ದೇಶಕ ಪ್ರಸನ್ನ ಶೆಟ್ಟಿ, ಸಿಝ್ಲರ್ ಪುತ್ತೂರು
ನಿರ್ದೇಶಕರು, ಬಂಟರ ಯಾನೆ ನಾಡವರ ಮಾತೃ ಸಂಘ (ರಿ.) ಪುತ್ತೂರು ತಾಲೂಕು ಸಮಿತಿ, ಮನೋಹರ್ ರೈ ಮನವಳಿಕೆ,ಮಲ್ಟಿ ಟಾಸ್ಕ್ ಆಪರೇಟರ್ ಮಾರ್ಕೆಟಿಂಗ್ ವಿಭಾಗ ಹೆಚ್.ಪಿ.ಸಿ.ಎಲ್. ಮಂಗಳೂರು, ಕೃಷಿ ಪ್ರಶಸ್ತಿ ಪುರಸ್ಕೃತರಾದ ತಾರಾನಾಥ ರೈ ನಗ್ರಿ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮದಲ್ಲಿ ಎಲ್ಲರು ಭಾಗವಹಿಸುವಂತೆ ಆಲಂಕಾರು ವಲಯ ಬಂಟರ ಸಂಘದ ಅಧ್ಯಕ್ಷ ಪ್ರಶಾಂತ ರೈ ಮನವಳಿಕೆ, ಕಾರ್ಯದರ್ಶಿ ಲೋಕನಾಥ ರೈ ಕೇಳ್ಕ,ಉಪಾಧ್ಯಕ್ಷ
ವಿಶ್ವನಾಥ ರೈ, ಇರಿಂಟಾಡಿ,ರಾಧಾಕೃಷ್ಣ ರೈ, ಪರಾರಿಗುತ್ತು, ಸಂಘಟನಾ ಕಾರ್ಯದರ್ಶಿಮೋಹನದಾಸ ಶೆಟ್ಟಿ, ಬಡಿಲ,ಜತೆ ಕಾರ್ಯದರ್ಶಿ ತುಳಸಿ ಎಲ್. ಶೆಟ್ಟಿ, ಆಲಂಕಾರು,ಕೋಶಾಧಿಕಾರಿ ಮಮತಾ ಕೆ. ಶೆಟ್ಟಿ, ಅಂಬರಾಜೆ ,ಯುವ ಬಂಟರ ಸಂಘದ ಅಧ್ಯಕ್ಷ ಗುರುಕಿರಣ್ ಶೆಟ್ಟಿ ಬಾಲಾಜೆ ಕಾರ್ಯದರ್ಶಿ ಕವನ್ ರೈ ಮನವಳಿಕೆ,ಮಹಿಳಾ ಬಂಟರ ಸಂಘದ ಅದ್ಯಕ್ಷೆ ಧನ್ಯಶ್ರೀ ಪಿ. ರೈ ಮನವಳಿಕೆ,ಕಾರ್ಯದರ್ಶಿ ಸುನೀತಾ ಜಿ. ರೈ ಕೇವಳ ಆಲಂಕಾರು ವಲಯ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಗ್ರಾಮ ಸಮಿತಿ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here