







ನೆಲ್ಯಾಡಿ: ಜೆಸಿಐ ಕೊಕ್ಕಡ ಕಪಿಲಾ ಘಟಕದ ಜುಲೈ ತಿಂಗಳ ಸಾಮಾನ್ಯ ಸಭೆ ಹಾಗೂ ವಲಯ ಉಪಾಧ್ಯಕ್ಷರ ಎರಡನೇ ಅಧಿಕೃತ ಭೇಟಿಯು ಗ್ರಾಮಾಭ್ಯುದಯ ಕಾರ್ಯಕ್ರಮ ಅನುಷ್ಠಾನ ಸಮಿತಿಯ ಶಿಬರಾಜೆ ಪಾದೆ ಕಚೇರಿಯಲ್ಲಿ ನಡೆಯಿತು.


ಸಭೆಯ ಅಧ್ಯಕ್ಷತೆಯನ್ನು ರಿತೇಶ್ ಎಂ. ಸ್ಟ್ರೆಲ್ಲಾ ವಹಿಸಿದ್ದರು. ಘಟಕದ ಕಾರ್ಯ ವೈಖರಿಯನ್ನು ವಲಯ ಉಪಾಧ್ಯಕ್ಷರಾದ ಕಾಶೀನಾಥ್ ಗೋಗಟೆ ಅವರು ಶ್ಲಾಘಿಸುತ್ತಾ ಮುಂದಿನ ವಲಯ ಹಾಗೂ ರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಘಟಕದ ವತಿಯಿಂದ ಫಲ್ಗುಣಿ ಪ್ರಾಂತ್ಯದ ವಲಯ ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು. ಆಯುಷ್ ಜೈನ್ ಅವರು ಅತಿಥಿಗಳನ್ನು ಆಹ್ವಾನಿಸಿ ಸಭೆಗೆ ವಲಯ ಉಪಾಧ್ಯಕ್ಷರನ್ನು ಪರಿಚಯಿಸಿದರು. ಜೆಸಿ ವಾಣಿ ಹಾಗೂ ಧ್ಯೇಯ ವಾಕ್ಯವನ್ನು ದಕ್ಷ ಜೈನ್ ಅವರು ವಾಚಿಸಿದರು. ಇದೇ ಸಂದರ್ಭದಲ್ಲಿ ಜುಲೈ ತಿಂಗಳಲ್ಲಿ ಹುಟ್ಟುಹಬ್ಬವನ್ನು ಆಚರಿಸಿದ ಯೋಗೀಶ್ ಎಸ್., ರೇಷ್ಮಾ ಡಿ ಅಲ್ಮೇಡಾ ಮತ್ತು ಅಕ್ಷತ್ ರೈ ಅವರಿಗೆ ಶುಭಾಶಯವನ್ನು ಸಲ್ಲಿಸಲಾಯಿತು.



ಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಡಾ. ಶೋಭಾ ಪಿ., ಕೆ. ಶ್ರೀಧರ ರಾವ್, ಸಂತೋಷ್ ಜೈನ್, ಜೋಸೆಫ್ ಪಿರೇರಾ, ಜೆಸಿಂತಾ ಡಿಸೋಜ, ನಿತ್ಯಾನಂದ ರೈ ಹಾಗೂ ವಲಯ ಉಪಾಧ್ಯಕ್ಷ ಜಿತೇಶ್ ಎಲ್. ಪಿರೇರಾ ಭಾಗವಹಿಸಿದ್ದರು. ಕಾರ್ಯದರ್ಶಿ ಜೋಯಲ್ ಪಿರೇರಾ ವಂದಿಸಿದರು.










