ಬಡಗನ್ನೂರು: ಭಾರೀ ಮಳೆಗೆ ಕುಸಿದು ಮಣ್ಣುಪಾಲಾದ ಬಾವಿ : ಲಕ್ಷಾಂತರ ರೂಪಾಯಿ ನಷ್ಟ

0

ಬಡಗನ್ನೂರು: ಭಾರೀ ಮಳೆಗೆ ಬಡಗನ್ನೂರು ಗ್ರಾಮದ ಸೇನೇರಮಜಲು ಎಂಬಲ್ಲಿ ಕುಡಿಯುವ ನೀರಿನ ಬಾವಿಯ ಕಟ್ಟೆಯು ನೀರೆಳೆಯುವ ರಾಟೆ ಸಮೇತ ಸಂಪೂರ್ಣವಾಗಿ ಕುಸಿದು ಮಣ್ಣುಪಾಲಾದ ಘಟನೆ ಸಂಭವಿಸಿದೆ.

 4 ತಿಂಗಳ ಹಿಂದೆಯಷ್ಟೇ ನಿರ್ಮಿಸಲಾಗಿದ್ದ ಕಟ್ಟೆ:
ಬಡಗನ್ನೂರು ಗ್ರಾಮದ ಸೇನೇರಮಜಲು ಪುರಂದರ ರೖೆ ಮನೆಯ ಕುಡಿಯುವ ನೀರಿನ ಬಾವಿಗೆ  4 ತಿಂಗಳ ಹಿಂದೆಯಷ್ಟೇ ನಿರ್ಮಿಸಲಾಗಿದ್ದ ಕಟ್ಟೆ ಸುಮಾರು 10 ಅಡಿ ಆಳವನ್ನು ಹೊಂದಿರುವ ಈ ಬಾವಿಯ ಸುತ್ತಲಿನ ಮಣ್ಣು ಅತ್ಯಂತ ಮೃದುವಾಗಿದ್ದು, ಮಳೆಗಾಲದಲ್ಲಿ ಜರಿದು ಬೀಳಬಾರದೆಂಬ ಮುನ್ನೆಚ್ಚರಿಕೆಯಿಂದ ಕಳೆದ 4 ತಿಂಗಳ ಹಿಂದೆಯಷ್ಟೇ ಸೂಕ್ತ ತಡೆಗೋಡೆ ನಿರ್ಮಿಸಲಾಗಿತ್ತು. ಬಾವಿಯ ತಳಭಾಗದ ಗಟ್ಟಿ ಜಾಗದಿಂದ ಮೇಲ್ಭಾಗಕ್ಕೆ ಸುಮಾರು 8 ಅಡಿಯಷ್ಟು ಎತ್ತರಕ್ಕೆ ಸುತ್ತಲೂ ಕೆಂಪು ಕಲ್ಲಿನಿಂದ ಭದ್ರವಾಗಿ ಗೋಡೆ ಕಟ್ಟಿ, ಸುತ್ತಲೂ ಬಾವಿ ಕಟ್ಟೆಯನ್ನು ನಿರ್ಮಿಸಲಾಗಿತ್ತು. ಆದರೆ, ಜುಲೈ 31ರಂದು ಸುರಿದ ವಿಪರೀತ ಮಳೆಗೆ ಮಣ್ಣು ಸಡಿಲಗೊಂಡು, ಬಾವಿಯ ಕಟ್ಟೆ ಹಾಗೂ ನೀರೆಳೆಯುವ ರಾಟೆ ಸಮೇತ ಇಡೀ ನಿರ್ಮಾಣವು ಬಾವಿಯೊಳಗೆ ಕುಸಿದುಬಿದ್ದಿದೆ.

​ಸುಮಾರು 2 ಲಕ್ಷ ರೂಪಾಯಿ ನಷ್ಟ:
ಬಾವಿಯ ಸುದೀರ್ಘ ಬಾಳಿಕೆಗಾಗಿ 8 ಅಡಿ ಎತ್ತರದ ಸುತ್ತುಗೋಡೆ ಹಾಗೂ ಮೇಲ್ಭಾಗದ ಕಟ್ಟೆಯ ನಿರ್ಮಾಣಕ್ಕಾಗಿ ಸುಮಾರು 1,300 ಕೆಂಪು ಕಲ್ಲುಗಳನ್ನು ಬಳಸಲಾಗಿತ್ತು. ಬಾವಿ ನಿರ್ಮಾಣವು ಅತ್ಯಂತ ನಾಜೂಕಿನ ಹಾಗೂ ಶ್ರಮದಾಯಕ ಕೆಲಸವಾಗಿದ್ದರಿಂದ ಕೂಲಿ ಮತ್ತು ಸಾಮಗ್ರಿಗಳಿಗಾಗಿ ಅಧಿಕ ವೆಚ್ಚ ತಗಲಿತ್ತು. ಇ

ದೀಗ ದಿಢೀರ್ ಕುಸಿತದಿಂದಾಗಿ ಅಂದಾಜು 2 ಲಕ್ಷ ರೂಪಾಯಿಗಳಷ್ಟು ಅಪಾರ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.

​ಮಳೆಗಾಲದ ಆರಂಭದಲ್ಲೇ ಕುಡಿಯುವ ನೀರಿನ ಬಾವಿ ಹೀಗೆ ಸಂಪೂರ್ಣ ಧರಾಶಾಹಿಯಾಗಿರುವುದರಿಂದ ಸ್ಥಳೀಯ ಕುಟುಂಬವು ನೀರಿನ ಅಭಾವ ಎದುರಿಸುವಂತಾಗಿದ್ದು, ಆತಂಕಕ್ಕೆ ಒಳಗಾಗಿದೆ.

LEAVE A REPLY

Please enter your comment!
Please enter your name here