ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೌಕ್ರಾಡಿಯಲ್ಲಿ ಕೃಷಿ ಸ್ವಉದ್ಯೋಗ ತರಬೇತಿ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿಸಿ ಟ್ರಸ್ಟ್(ರಿ) ಕಡಬ ತಾಲೂಕು ನೆಲ್ಯಾಡಿ ವಲಯದ ಕೌಕ್ರಾಡಿ ಕಾರ್ಯಕ್ಷೇತ್ರದಲ್ಲಿ ಆ.2ರಂದು ಕೃಷಿ ಸ್ವ ಉದ್ಯೋಗ ತರಬೇತಿ ಕಾರ್ಯಕ್ರಮ ನಡೆಯಿತು. ತಾಲೂಕು ಕೃಷಿ ಮೇಲ್ವಿಚಾರಕರಾದ ಸೋಮೇಶ್ ಪ್ರಾಸ್ತವಿಕ ಮಾತನಾಡಿದರು.


ಪ್ರಗತಿಪರ ಕೃಷಿಕ ಬಾಲಕೃಷ್ಣ ಹಾರ್ಪಾಳ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಕೃಷಿ ವ್ಯವಸಾಯದಲ್ಲಿ ಪ್ರಥಮವಾಗಿ ಗಮನಿಸಬೇಕಾದ ಅಂಶಗಳು ಮಣ್ಣು ಪರೀಕ್ಷೆ, ಉತ್ತಮವಾದ ಬಿತ್ತನೆ ಬೀಜಗಳ ಆಯ್ಕೆ, ರಸಗೊಬ್ಬರಗಳ ಆಯ್ಕೆ,ಬಗ್ಗೆ ಮತ್ತು ರೈತನು ಏಕ ಕೃಷಿ ಅವಲಂಬಿಸದೆ ಸಮಗ್ರ ಕೃಷಿ ಮಾಡುವುದರಿಂದ ಮತ್ತು ಸಾವಯವ ಗೊಬ್ಬರಗಳನ್ನು ಅತೀ ಹೆಚ್ಚು ಬಳಸಿ ವ್ಯವಸಾಯ ಮಾಡುವುದರಿಂದ ಉತ್ತಮ ಗುಣಮಟ್ಟ ಬೆಳೆಗಳನ್ನು ಬೆಳೆಯಬಹುದು ರೈತನು ಲಾಭದಾಯಕವಾಗಿ ಹೊಂದಬಹುದು ಮತ್ತು ಕೃಷಿ ಮಾರುಕಟ್ಟೆಯ ಬಗ್ಗೆ ರೈತನು ಬೆಳೆದ ಬೆಳೆಗೆ ರೈತನೇ ನಿಗದಿತ ಬೆಲೆಗೆ ಮಾರುಕಟ್ಟೆಯಲ್ಲಿ ಮಾರುವ ಬಗ್ಗೆ ಅಥವಾ ಸ್ವಉದ್ಯೋಗ ಮಾಡುವುದರ ಬಗ್ಗೆ ಹಾಗೂ ಬೆಳೆ ವಿಮೆ ಮಾಡಿಸುವುದರಿಂದ ಸಿಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಂದರಿ ವಹಿಸಿದರು. ಒಕ್ಕೂಟ ಅಧ್ಯಕ್ಷರು ಪದಾಧಿಕಾರಿಗಳು ಪ್ರಗತಿ ಬಂಧು ಸ್ವ ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.ಸೌಮ್ಯ ರವರು ಸ್ವಾಗತಿಸಿ, ಹರ್ಷಿತಾ ವಂದಿಸಿದರು. ಹೆಮಾಲತಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here