ಮುಂಡೂರು ನಿವಾಸಿ ನಿವೃತ್ತ ಸೈನಿಕ ಶೇಷಪ್ಪ ಬಿ.ಎ ಹೃದಯಾಘಾತದಿಂದ ನಿಧನ

0


ಪುತ್ತೂರು: ಮುಂಡೂರು ನಿವಾಸಿ ನಿವೃತ್ತ ಸೈನಿಕ ಶೇಷಪ್ಪ ಬಿ ಎ ಅವರು ಆ.5 ರಂದು ನಿಧನರಾದರು.


ಭಾರತೀಯ ಸೇನೆಯಲ್ಲಿ 16 ವರ್ಷ ಸೇವೆ ಸಲ್ಲಿಸಿದ ಅವರು ಮೈಸೂರಿನ ಅವೋಟೊ ಆಸ್ಪತ್ರೆಯಲ್ಲಿ ಉದ್ಯೋಗದಲ್ಲಿದ್ದರು. ಅಲ್ಲಿ ಅವರು ನಿಧನರಾದರು. ಅವರ ಪ್ರಾರ್ಥಿವ ಶರೀರವನ್ನು ಉದಯಗಿರಿ ಹುಟ್ಟೂರಿಗೆ ಆ.6ರಂದು ತರಲಾಯಿತು.

ಈ ಸಂದರ್ಭ ಮಾಜಿ ಸೈನಿಕರ ಸಂಘದ ಅಧ್ಯಕ್ಷರು ಪದಾಧಿಕಾರಿಗಳು ಮನೆಗೆ ತೆರಳಿ ಸೈನಿಕ ಗೌರವದೊಂದಿಗೆ ಅಂತಿಮ ನಮನ ಸಲ್ಲಿಸಿದರು. ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here