ಫಿಲೋ ಪ್ರತಿಭಾ– ಇಂಡಿಯನ್ ಸ್ಕೂಲ್ ವಿದ್ಯಾರ್ಥಿಗಳ ಸಾಧನೆ

0

ಪುತ್ತೂರು: ಪುತ್ತೂರಿನ ಸೇಂಟ್ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ 2026ರ ಆಗಸ್ಟ್ 6ರಂದು ನಡೆದ ಫಿಲೋ ಪ್ರತಿಭಾ–2026 ಹೈಸ್ಕೂಲ್ ಮಕ್ಕಳ ಅಂತರ್ ಶಾಲಾ ಸ್ಪರ್ಧೆಯಲ್ಲಿ‌ ಉಪ್ಪಿನಂಗಡಿ ಇಂಡಿಯನ್ ಸ್ಕೂಲ್ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

8ನೇ ತರಗತಿಯ ಸಹಲಾ ಫಾತಿಮಾ ಪೆನ್ಸಿಲ್ ಸ್ಕೆಚ್ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದರು. 10ನೇ ತರಗತಿಯ ಫಾತಿಮಾ ಸುಹಾ ಮತ್ತು ಫಾತಿಮತ್ ನೌಶಿಯಾ ಕೊಲಾಜ್ ಮೇಕಿಂಗ್ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದರು. 9ನೇ ತರಗತಿಯ ಸಹಲ್ ಕನ್ನಡ ಕವನ ವಾಚನ ವಿಭಾಗದಲ್ಲಿ ತೃತೀಯ ಬಹುಮಾನ ಪಡೆದರು. 9ನೇ ತರಗತಿಯ ಅಹ್ಮದ್ ಶಹಾದುಲ್ಲಾ ಮತ್ತು ಮೊಹಮ್ಮದ್ ರಾಫೀದ್ ವಿಜ್ಞಾನ ಮಾದರಿ ವಿಭಾಗದಲ್ಲಿ ತೃತೀಯ ಬಹುಮಾನ ಪಡೆದರು.ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಶಿಕ್ಷಕಿ ಭವ್ಯ ತರಬೇತಿ ಹಾಗೂ ಮಾರ್ಗದರ್ಶನ ನೀಡಿದ್ದರು.ವಿಜೇತ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕ ವೃಂದ ಹಾಗೂ ಪೋಷಕರು ಅಭಿನಂದಿಸಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here