






ಪುತ್ತೂರು: ನೆಲ್ಲಿಕಟ್ಟೆಯಲ್ಲಿರುವ ಈಶ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕ – ರಕ್ಷಕ ಸಭೆ ನಡೆಯಿತು.


ಅನುಶ್ರೀ ಮತ್ತು ಹರಿಪ್ರಿಯಾ ಪ್ರಾರ್ಥಿಸಿದರು. ಸಭೆಯಲ್ಲಿ ಸಂಸ್ಥೆಯ ಸಂಸ್ಥಾಪಕರಾದ ಡಾ. ಗೋಪಾಲಕೃಷ್ಣ, ಪ್ರಾಂಶುಪಾಲರಾದ ಸುಶಾಂತಿ , ಶಿಕ್ಷಕ ವೃಂದ ಹಾಗೂ ಪೋಷಕರು ಭಾಗವಹಿಸಿದ್ದರು. ಸಂಸ್ಥೆ ಯ ಪ್ರಾಂಶುಪಾಲರು ಸ್ವಾಗತಿಸಿದರು.




ಸಭೆಯಲ್ಲಿ ಮಾತನಾಡಿದ ಶಾಲಾ ಸಂಸ್ಥಾಪಕರಾದ ಡಾ. ಗೋಪಾಲಕೃಷ್ಣ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪೋಷಕರ ಪಾತ್ರ ಮತ್ತು ಕರ್ತವ್ಯಗಳ ಮಹತ್ವವನ್ನು ತಿಳಿಸಿದರು. ಹಿರಿಯ ಉಪನ್ಯಾಸಕರಾದ ಭೀಮಶಾಸ್ತ್ರೀ ಸಂಸ್ಥೆಯ ನೀತಿ ನಿಯಮಗಳನ್ನು ವಿವರವಾಗಿ ಪೋಷಕರಿಗೆ ತಿಳಿಸಿದರು. ಪೋಷಕರ ಅಭಿಪ್ರಾಯಗಳನ್ನು ಆಲಿಸಿ, ಅವರ ಸಲಹೆಗಳನ್ನು ಸ್ವೀಕರಿಸಲಾಯಿತು.
ಶಾಲೆಯ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಗಮನದಲ್ಲಿಟ್ಟುಕೊಂಡು ಹೊಸದಾಗಿ ರಕ್ಷಕ-ಶಿಕ್ಷಕ ಸಂಘವನ್ನು ರಚಿಸಲಾಯಿತು. ಸಂಘದ ಅಧ್ಯಕ್ಷರಾಗಿ ಡೀಕಯ್ಯ ನಾಯಕ್, ಉಪಾಧ್ಯಕ್ಷರಾಗಿ ಭಾರತಿ, ಕಾರ್ಯದರ್ಶಿಯಾಗಿ ಈಶ ವಿದ್ಯಾಲಯದ ಉಪನ್ಯಾಸಕರಾದ ಭೀಮಶಾಸ್ತ್ರಿ ಹಾಗೂ ಉಪಕಾರ್ಯದರ್ಶಿಯಾಗಿ ತುಳಸಿ ಅವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮವನ್ನು ಉಪನ್ಯಾಸಕ ಕಲೈವಾಣಿ ನಿರೂಪಿಸಿದರು. ಹಿರಿಯ ಉಪನ್ಯಾಸಕಿ ಗೀತಾಗೌರಿ ವಂದನಾರ್ಪಣೆಯೊಂದಿಗೆ ಸಭೆ ಮುಕ್ತಾಯಗೊಂಡಿತು.










