








ಮಂಗಳೂರು:ರಾಜ್ಯದಲ್ಲಿ ಆಡಳಿತ ನಡೆಸಿದ ಮತ್ತು ನಡೆಸುತ್ತಿರುವ ರಾಜಕೀಯ ಪಕ್ಷಗಳು ಸಮಾಜದ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ಸಂಪೂರ್ಣ ವಿಫಲವಾಗಿವೆ.ಈ ಹಿನ್ನೆಲೆಯಲ್ಲಿ ಜನವರಿ ತಿಂಗಳಲ್ಲಿ ಹೊಸ ಪ್ರಾದೇಶಿಕ ರಾಜಕೀಯ ಪಕ್ಷವನ್ನು ಆಧಿಕೃತವಾಗಿ ಲೋಕಾರ್ಪಣೆ ಮಾಡಲಾಗುವುದು ಎಂದು ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಸಂವಿಧಾನದ ಮೂಲ ಆಶಯಗಳಾದ ಸಮಾನತೆ, ಸಾಮಾಜಿಕ ನ್ಯಾಯ, ಜಾತ್ಯತೀತತೆ ಹಾಗೂ ವೈಜ್ಞಾನಿಕ ಮನೋಭಾವ ಹೊಂದಿರುವ ನೂತನ ರಾಜಕೀಯ ಪಕ್ಷದ ನೋಂದಣಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ.ಸಾಂವಿಧಾನಿಕ ಪದಗಳನ್ನು ಒಳಗೊಂಡ ಹೆಸರಿನೊಂದಿಗೆ ಜನವರಿಯಲ್ಲಿ ಬೃಹತ್ ಸಮಾವೇಶ ನಡೆಸಿ ಪಕ್ಷವನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಲಿದ್ದೇವೆ ಎಂದು ತಿಳಿಸಿದರು.
ಯಾವುದೇ ಒಬ್ಬ ನಟನ ಸ್ಟಾರ್ ಪವರ್ ಅಥವಾ ಅಭಿಮಾನಿ ಬಳಗದ ಮೇಲೆ ಪಕ್ಷ ಕಟ್ಟುತ್ತಿಲ್ಲ.ಬಾಬಾಸಾಹೇಬ್ ಅಂಬೇಡ್ಕರ್, ಪೆರಿಯಾರ್, ಕಾನ್ಶೀರಾಮ್ ಅವರ ಸಿದ್ಧಾಂತಗಳಡಿ ವರ್ಷಗಳಿಂದ ಜನಪರ ಹೋರಾಟ ನಡೆಸಿಕೊಂಡು ಬಂದಿರುವ ರೈತರು, ಚಳವಳಿಗಾರರು, ಬುದ್ಧಿಜೀವಿಗಳು ಹಾಗೂ ಯುವಕರನ್ನು ಸಂಘಟಿಸಿ ರಾಜಕೀಯ ಪ್ರಾದೇಶಿಕ ಚಳವಳಿಯನ್ನು ಗಟ್ಟಿಗೊಳಿಸುತ್ತಿದ್ದೇವೆ ಎಂದು ಚೇತನ್ ಹೇಳಿದರು.





ಪುತ್ತೂರಿನಲ್ಲಿ ಸಮಾನತವಾದಿಗಳ ಸಭೆ -ಹೊಟೇಲ್ ಪಂಚರತ್ನದಲ್ಲಿ ಊಟ

ಪುತ್ತೂರಿಗೆ ಭೇಟಿ ನೀಡಿದ್ದ ನಟ ಚೇತನ್ ಅಹಿಂಸಾ' ಅವರುಸುದ್ದಿ’ ಜೊತೆ ಮಾತನಾಡುತ್ತಾ, `ಜನಪರ ಕಾಳಜಿಯಿರುವವರೆಲ್ಲ ಸೇರಿ ಪುತ್ತೂರನ್ನು ಹೇಗೆ ಬೆಳೆಸಬಹುದು.ಕರಾವಳಿಯನ್ನು ಹೇಗೆ ಅಭಿವೃದ್ಧಿ ಪಡಿಸಬಹುದು ಎಂಬುದಕ್ಕೆ ಪುತ್ತೂರಿನಲ್ಲಿ ನಾವು ಸಮಾನತವಾದಿಗಳು ಸೇರಿ ಸಭೆ ನಡೆಸಿದ್ದೇವೆ ‘ ಎಂದು ಹೇಳಿದರು.ಪುತ್ತೂರಿನ ಕೋರ್ಟ್ರಸ್ತೆಯಲ್ಲಿರುವ ಹೊಟೇಲ್ ಪಂಚರತ್ನದಲ್ಲಿ ಮೀನಿನ ಊಟ ಸವಿದ ಚೇತನ್ ಅಹಿಂಸಾ, ಪುತ್ತೂರಿಗೆ ಆಗಾಗ ಬಂದು ಹೋಗುತ್ತಿದ್ದೇನೆ.ಸಮಾನತವಾದಿಗಳ ಸಭೆ ಬಳಿಕ ಊಟಕ್ಕೆ ಪುತ್ತೂರಿನ ಪಂಚರತ್ನ ಹೊಟೇಲ್ಗೆ ಬಂದಿದ್ದೇನೆ.ಅತ್ಯುತ್ತಮ ಊಟ, ಒಳ್ಳೆಯ ಹಾಸ್ಪಿಟಾಲಿಟಿ,ಉತ್ತಮ ಸರ್ವ್, ಫಿಶ್, ಪ್ರೌನ್ಸ್ ಬಹಳ ಚೆನ್ನಾಗಿತ್ತು.ನೆಕ್ಸ್ಟ್ ರೆಕಮಂಡೇಶನ್ ಇದ್ರೆ ಅದು ಪುತ್ತೂರಿನ ಪಂಚರತ್ನ ಹೊಟೇಲ್ ಎಂದರು.ಅವರ ಬೆಂಬಲಿಗರು ಜೊತೆಗಿದ್ದರು.









