ಕಾಡೂರು ಸೀತಾರಾಮ ಶಾಸ್ತ್ರಿಯವರಿಗೆ ಸುಶಾಶನ ಗೌರವ ಪುರಸ್ಕಾರ-2026

0

ಪುತ್ತೂರು: ಶ್ರೀ ಕೃಷ್ಣ ಮಠ ಉಡುಪಿ ಮತ್ತು ಪರ್ಯಾಯ ಶ್ರೀ ಶೀರೂರು ಮಠ ಇವರ ಆಶ್ರಯದಲ್ಲಿ ಆ. 15 ರಂದು‌ ಉಡುಪಿಯಲ್ಲಿ ನಡೆಯಲಿರುವ ಸುಧಾಕರ ಆಚಾರ್ಯ ಕಲಾರಾಧನೆಯ 36 ನೇ ವರ್ಷದ ಸ್ವಾತಂತ್ರೋತ್ಸವ- ತಾಳ ಮದ್ದಳೆಯ ಆಚರಣೆ ಸಮಾರಂಭದಲ್ಲಿ ಪುತ್ತೂರಿನ ಉದ್ಯಮಿ ಕಾಡೂರು ಸೀತಾರಾಮ ಶಾಸ್ತ್ರಿ ಅವರಿಗೆ ಸುಶಾಶನ ಗೌರವ ಪುರಸ್ಕಾರ – 2026 ಸನ್ಮಾನ ನಡೆಯಲಿದೆ.

ಕಾಡೂರು ಸೀತಾರಾಮ ಶಾಸ್ತ್ರಿ ಅವರು ಪುತ್ತೂರು ಯಕ್ಷರಂಗ ಸಂಸ್ಥೆಯ ಅಧ್ಯಕ್ಷರಾಗಿದ್ದು, ಪುತ್ತೂರಿನಲ್ಲಿ ಯಕ್ಷಗಾನ ಬಯಲಾಟ ಮತ್ತು ತಾಳಮದ್ದಳೆ ಕೂಟಗಳನ್ನು ಸಂಂಘಟಿಸಿ, ಹೆಸರನ್ನು ಪಡೆದಿದ್ದಾರೆ. ಇವರು ಪುತ್ತೂರಿನಲ್ಲಿ ಕಳೆದ 35 ವರ್ಷಗಳಿಂದ ಅಡಿಕೆ ವ್ಯಾಪಾರ ಉದ್ಯಮ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ. ಪುತ್ತೂರು ದಸರಾ ನಾಡ ಹಬ್ಬ ಸಮಿತಿಯ ಪದಾಧಿಕಾರಿಯಾಗಿ, ಪುತ್ತೂರು ನಗರ ಹವ್ಯಕ ಸಂಘಟನೆಯ ಅಧ್ಯಕ್ಷರಾಗಿ, ಪುತ್ತೂರು ವರ್ತಕರ ಸಂಘದ ಪದಾಧಿಕಾರಿಯಾಗಿ, ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಕಾರ್ಯ‌ನಿರ್ವಹಿಸಿಕೊಂಡು ಬಂದಿದ್ದಾರೆ.

LEAVE A REPLY

Please enter your comment!
Please enter your name here