







ಕೆಯ್ಯೂರು: ಕಟ್ಟತ್ತಾರು ಜಂಕ್ಷನ್ನಲ್ಲಿ ಬೀದಿ ದೀಪದ ಸಮಸ್ಯೆಯಿಂದ ರಾತ್ರಿ ಸಮಯದಲ್ಲಿ ಸಾರ್ವಜನಿಕರು, ಪಾದಚಾರಿಗಳು ಹಾಗೂ ವಾಹನ ಸವಾರರು ಹಲವು ತೊಂದರೆಗಳನ್ನು ಎದುರಿಸುತ್ತಿದ್ದರು. ಈ ಸಮಸ್ಯೆಯನ್ನು ಮನಗಂಡ ಕಟ್ಟತ್ತಾರಿನ ಯುವಕರು ಒಗ್ಗಟ್ಟಾಗಿ ಮುಂದೆ ಬಂದು ಕೆಯ್ಯೂರು ಗ್ರಾಮ ಪಂಚಾಯತ್ನ PDO ಅವರಿಗೆ ಮನವಿ ಸಲ್ಲಿಸಿ, ಬೀದಿ ದೀಪವನ್ನು ಶೀಘ್ರವಾಗಿ ಸರಿಪಡಿಸುವಂತೆ ವಿನಂತಿಸಿದರು.


ಯುವಕರು ಸಲ್ಲಿಸಿದ ಮನವಿಗೆ ಯಾವುದೇ ವಿಳಂಬವಿಲ್ಲದೆ ತಕ್ಷಣ ಸ್ಪಂದಿಸಿ, ಸಮಸ್ಯೆಯ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಂಡ ಕೆಯ್ಯೂರು ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಕಟ್ಟತ್ತಾರಿನ ಜನತೆಯ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಧನ್ಯವಾದಗಳು.



ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಸ್ಪಂದಿಸಿ, ತ್ವರಿತವಾಗಿ ಪರಿಹಾರ ಕಲ್ಪಿಸುವ ನಿಜವಾದ ಜನಪರ ಆಡಳಿತ. ಜನರ ಸಮಸ್ಯೆಯನ್ನು ತಮ್ಮದೇ ಸಮಸ್ಯೆಯೆಂದು ಪರಿಗಣಿಸಿ ಕಾರ್ಯಪ್ರವೃತ್ತರಾದ ಪಂಚಾಯತ್ ಪಿಡಿಒ ಅವರ ಕರ್ತವ್ಯನಿಷ್ಠೆ, ಸ್ಪಂದನಾಶೀಲತೆ ಹಾಗೂ ಸಾರ್ವಜನಿಕ ಸೇವಾ ಮನೋಭಾವ ನಿಜಕ್ಕೂ ಶ್ಲಾಘನೀಯ.
ಮುಂದೆಯೂ ಕಟ್ಟತ್ತಾರು ಸೇರಿದಂತೆ ಕೆಯ್ಯೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಜನರ ಸಮಸ್ಯೆಗಳಿಗೆ ಇದೇ ರೀತಿಯ ತ್ವರಿತ ಸ್ಪಂದನೆ, ಪಾರದರ್ಶಕತೆ, ಜನಪರ ಕಾಳಜಿ ಮತ್ತು ಅಭಿವೃದ್ಧಿಯ ದೃಷ್ಟಿಕೋನ ಮುಂದುವರಿಯಲಿ ಎಂದು ಹಾರೈಸುತ್ತೇವೆ ಎಂದು ತಿಳಿಸಿದ್ದಾರೆ.










