






ಬೆಟ್ಟಂಪಾಡಿ: ಕೂಟತ್ತಾನ ದಾರುಲ್ ಆಮಾನ್ ಮದ್ರಸದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಮದ್ರಸ ಅಧ್ಯಕ್ಷ ಯಾಕೂಬು ಬಿ ಎ ಕೂಟತ್ತಾನ ನೆರವೇರಿಸಿದರು.


ಜಲೀಲ್ ಕೂಟತ್ತಾನ ಸ್ವಾಗತಿಸಿ, ಮದ್ರಸ ಅಧ್ಯಾಪಕ ಶರೀಪ್ ಮುಸ್ಲಿಯಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಸಮಾರಂಭದಲ್ಲಿ ಇಸ್ಮಾಯಿಲ್ ಹಾಜಿ ಕೂಟತ್ತಾನ, ಕಾರ್ಯದರ್ಶಿ ಇಸಾಕ್ ಕೆ.ಎಚ್, ಕೆ.ಕೆ ಯಾಕೂಬು ಕೂಟತ್ತಾನ, ರಹಿಮಾನ್ ಬೆಟ್ಟಂಪಾಡಿ, ಶರೀಪ್ ಬಿ.ಕೆ, ಝಾಹಿರ್, ಇರ್ಫಾನ್ ಹಾಗೂ ಮದ್ರಸ ವಿದ್ಯಾರ್ಥಿಗಳು ಭಾಗವಹಿಸಿದ್ದರು.













