






ಬೆಟ್ಟಂಪಾಡಿ: ಬೆಟ್ಟಂಪಾಡಿ ಸರಕಾರಿ ಹಿ.ಪ್ರಾ. ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. 2003-04ನೇ ಸಾಲಿನ ಏಳನೇ ತರಗತಿಯ ವಿದ್ಯಾರ್ಥಿಗಳು ಕೊಡುಗೆಯಾಗಿ ನೀಡಿರುವ ಧ್ವಜಸ್ತಂಭವನ್ನು ಅಕ್ಷರ ಸಂಧ್ಯೆ ಟ್ರಸ್ಟ್ ನ ಅಧ್ಯಕ್ಷ ಜಗನ್ನಾಥ ರೈ ಕೊಮ್ಮಂಡ ಉದ್ಘಾಟಿಸಿದರು.


ಎಸ್.ಡಿ.ಎಮ್.ಸಿ. ಅಧ್ಯಕ್ಷ ಶರೀಫ್ ಎನ್. ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಿಕ್ಷಣ ಇಲಾಖೆಯ ಸಮೂಹ ಸಂಪನ್ಮೂಲ ವ್ಯಕ್ತಿ ನಾರಾಯಣ ಡಿ., ಹಿರಿಯರಾದ ಮೊಹಮ್ಮದ್, ಸೀತಾರಾಮ ಗೌಡ ಎಂ., ಪ್ರಭಾಕರ ರೈ ಭಾಜುವಳ್ಳಿ, ಯಾಕೂಬ್ ಕೂಟತ್ತಾನ, ಹಿರಿಯ ವಿದ್ಯಾರ್ಥಿಗಳಾದ ಗೌರಿಶಂಕರ್, ಮೋಹನ್, ನವೀನ್ ರೋಡ್ರಿಗಸ್, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು, ಪೋಷಕರು, ಶಿಕ್ಷಕರು, ಅಡುಗೆ ಸಿಬ್ಬಂದಿಗಳು, ಪೂರ್ವ ಪ್ರಾಥಮಿಕ ವಿಭಾಗದ ಸಹಾಯಕಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



ಧ್ವಜಸ್ತಂಭವನ್ನು ಕೊಡುಗೆಯಾಗಿ ನೀಡಿರುವ 2003-4ನೇ ಸಾಲಿನ ವಿದ್ಯಾರ್ಥಿಗಳಾದ ಶರೀಫ್ ಎನ್., ಮೋಹನ್, ನವೀನ್ ರೋಡ್ರಿಗಸ್ ಇವರಿಗೆ ಶಾಲು ಹಾಗೂ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಮಕ್ಕಳಿಂದ ಶಿಕ್ಷಕರಿಂದ, ಪೋಷಕರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸಿಆರ್‌ಪಿ ನಾರಾಯಣ ಡಿ., ಪ್ರಭಾಕರ್ ರೈ ಭಾಜುವಳ್ಳಿ, ಹಿರಿಯರಾದ ಮಹಮ್ಮದ್, ನಾಗೇಶ್ ಕಜೆ, ಶರೀಫ್ ಶಾಲಾ ಬಳಿ ಕಾರ್ಯಕ್ರಮಕ್ಕೆ ಆರ್ಥಿಕ ಸಹಕಾರ ನೀಡಿದರು. ಪ್ರಭಾರ ಮುಖ್ಯ ಗುರು ಮಮತಾ ಪ್ರಸ್ತಾವಿಕದೊಂದಿಗೆ ಸ್ವಾಗತಿಸಿ, ಅತಿಥಿ ಶಿಕ್ಷಕಿ ಮಮತಾ ಕೆ.ಎನ್ ಕಾರ್ಯಕ್ರಮ ನಿರೂಪಿಸಿದರು. ಅತಿಥಿ ಶಿಕ್ಷಕಿ ರಮ್ಯಾ ಕೆ. ವಂದಿಸಿ, ಗೌರವ ಶಿಕ್ಷಕಿ ಭಾರತಿ ಸಹಕರಿಸಿದರು.










