






ಆಲಂಕಾರು: ವಿದ್ಯಾಭಾರತಿ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ ಇದರ ವತಿಯಿಂದ ವಿವೇಕಾನಂದ ಸೆಂಟ್ರಲ್ ಸ್ಕೂಲ್, ಪುತ್ತೂರು ಇಲ್ಲಿ ಜಿಲ್ಲಾಮಟ್ಟದ ಗಣಿತ – ವಿಜ್ಞಾನ ಮೇಳ ಮತ್ತು ಸಂಸ್ಕೃತಿ ಮಹೋತ್ಸವ ನಡೆಯಿತು.ಇದರಲ್ಲಿ ಭಾಗವಹಿಸಿದ ಶ್ರೀ ಭಾರತಿ ಹಿರಿಯ ಪ್ರಾಥಮಿಕ ಶಾಲೆ ಆಲಂಕಾರು ಇಲ್ಲಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದರು.


ಬಾಲ ವರ್ಗದ ವಿಭಾಗದಲ್ಲಿ 8ನೇ ತರಗತಿಯ ದ್ಯುತಿ ಎಚ್ ಕೆ – ಆಲಂಕಾರು ಕೋಡಿಲ ನಿವಾಸಿಗಳಾದ ಸ್ವಪ್ನ ಹರಿಶಂಕರ ಅವರ ಪುತ್ರಿ – “MODEL BASED ON SENSOR” ಎಂಬ ವಿಜ್ಞಾನ ಪ್ರದರ್ಶನ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದರು.ಹಾಗೂ ಬಾಲವರ್ಗದ Clay Modelling ಸ್ಪರ್ಧೆಯಲ್ಲಿ 6ನೇ ತರಗತಿಯ ನಿಶಾನ್ ಎಸ್ – ಆಲಂಕಾರು ಸುರುಳಿಯ ತಿಲೋತ್ತಮ ಗಣೇಶ್ ಎಸ್ ಅವರ ಪುತ್ರ – ಪ್ರಥಮ ಸ್ಥಾನ ಪಡೆದರು.ಇಬ್ಬರೂ ಸೆಪ್ಟೆಂಬರ್ 04, 05, 06 ರಂದು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಹಗರಿಬೊಮ್ಮನಹಳ್ಳಿ, ಬಳ್ಳಾರಿ ಇಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.













