ಪೆರ್ಲಂಪಾಡಿ ಷಣ್ಮುಖದೇವ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

0

ಪುತ್ತೂರು: ಪೆರ್ಲಂಪಾಡಿ ಷಣ್ಮುಖದೇವ ಪ್ರೌಢಶಾಲೆಯಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ತೀರ್ಥಾನಂದ ದುಗ್ಗಳ ಇವರ ಅಧ್ಯಕ್ಷತೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಲಕ್ಷ್ಮಣ ಗೌಡ ದರ್ಖಾಸು ಇವರ ಧ್ವಜಾರೋಹಣ ನೆರವೇರಿಸಿದರು.

ಶಾಲಾ ವಿದ್ಯಾರ್ಥಿಗಳ ಸರಸ್ವತಿ ವಂದನೆಯೊಂದಿಗೆ ಸಭೆಯು ಆರಂಭವಾಯಿತು. ಶಾಲೆಯ ನಿಕಟಪೂರ್ವ ಸಂಚಾಲಕ ಗಣೇಶ್ ಭಟ್ ಮಾಪಲಮಜಲು ಮಾತನಾಡಿ,
ಶಾಲಾ ಸ್ಥಾಪನೆಗೈದ ಮಹನೀಯರನ್ನು ಸ್ಮರಿಸಿಕೊಳ್ಳುತ್ತಾ ಶಾಲೆ ನಡೆದು ಬಂದ ದಾರಿಯನ್ನು ಅವಲೋಕನ ಮಾಡಿಕೊಂಡು ಇಂದು ಶಾಲೆ ಈ ರೀತಿ ಬೆಳೆಯಲುಸಹಕಾರ ನೀಡಿದ ಸರ್ವರನ್ನೂ ವಂದಿಸಿ ಪ್ರಸ್ತುತ ಆಡಳಿತ ಮಂಡಳಿಯ ಕಾರ್ಯವನ್ನು ಶ್ಲಾಘಿಸಿದರು.

ದೀರ್ಘಾವಧಿಯಿಂದ ಶಾಲೆಯಲ್ಲಿ ಜವಾನರಾಗಿದ್ದು ಸ್ವಯಂ ನಿವೃತ್ತಿ ಪಡೆದ ವಸಂತ ಕೆರೆಮೂಲೆ ಇವರನ್ನು ಸಭೆಯಲ್ಲಿ ಗೌರವಿಸಲಾಯಿತು.

ಮುಖ್ಯಗುರು ಶ್ರೀಮತಿ ಕೃಷ್ಣ ವೇಣಿ ಯವರು ವೇದಿಕೆ ಯಲ್ಲಿ ಉಪಸ್ಥಿತರಿದ್ದರು.ಕೊಳ್ತಿಗೆಯ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳು, ಶಾಲೆಯ ಆಡಳಿತ ಸಮಿತಿಯ ಪದಾಧಿಕಾರಿಗಳು, ವಿದ್ಯಾಭಿಮಾನಿಗಳು, ದಾನಿಗಳು, ಶಾಲೆಯ ಸಿಬ್ಬಂದಿಗಳು ಶಾಲೆಯ ನಿವೃತ್ತ ಅಧ್ಯಾಪಕರಾದ ವಿಷ್ಣುಮೂರ್ತಿ, ಕಚೇರಿ ಸಹಾಯಕರಾಗಿದ್ದ ಸತ್ಯಶ್ರೀ ಸಭೆಯಲ್ಲಿ ಉಪಸ್ಥಿತರಿದ್ದರು.

ಶಾಲಾ ಸಂಚಾಲಕ ಶಿವರಾಮ ಭಟ್ ಬೀರ್ಣಕಜೆ ಸ್ವಾಗತಿಸಿದರು.ಸಹಶಿಕ್ಷಕರಾದ ಭವ್ಯಾ ನಿರೂಪಿಸಿದರು.ಶ್ರೀ ದಿವಾಕರ ರೈ ಕೆರೆಮೂಲೆ ವಂದಿಸಿದರು.

LEAVE A REPLY

Please enter your comment!
Please enter your name here