









ಉಪ್ಪಿನಂಗಡಿ: ಎಸ್ಡಿಪಿಐ ಉಪ್ಪಿನಂಗಡಿ- ಕಡಬ ಬ್ಲಾಕ್ ಸಮಿತಿ ವತಿಯಿಂದ ಉಪ್ಪಿನಂಗಡಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಬ್ಲಾಕ್ ಸಮಿತಿ ಅಧ್ಯಕ್ಷ ಸುಲೈಮಾನ್ ಬಿ.ಕೆ. ನೆರವೇರಿಸಿದರು. ವಕೀಲ ನೌಷದ್ ಕೆ.ಎಂ. ಸಂದೇಶ ಭಾಷಣ ಮಾಡಿದರು.



ಈ ಸಂದರ್ಭ ಬ್ಲಾಕ್ ಉಪಾಧ್ಯಕ್ಷ ಮುಸ್ತಫಾ ಲತೀಫಿ, ಗ್ರಾ.ಪಂ. ಮಾಜಿ ಸದಸ್ಯ ಮೈಸಿದ್ ಇಬ್ರಾಹಿಂ, ಉಪ್ಪಿನಂಗಡಿ ಗ್ರಾಮ ಸಮಿತಿ ಎಸ್ಡಿಪಿಐ ಅಧ್ಯಕ್ಷ ಮುಸ್ತಫಾ ನಿರ್ಮಾ, ವಿಮ್ ಉಪ್ಪಿನಂಗಡಿ- ಕಡಬ ಬ್ಲಾಕ್ ಸಮಿತಿ ಅಧ್ಯಕ್ಷೆ ಫಾಹಿನ ಕೋಡಿಂಬಾಡಿ, ಕಾರ್ಯದರ್ಶಿ ನುಶ್ರತ್, ಗ್ರಾ.ಪಂ. ಮಾಜಿ ಸದಸ್ಯರಾದ ಝರಿನ ಇಕ್ಬಾಲ್, ನೆಬಿಸ ಉಪಸ್ಥಿತರಿದ್ದರು. ಝಕರಿಯಾ ಕೊಡಿಪ್ಪಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.










