ಸಾಜ ಪನೆತ್ತಡ್ಕದಲ್ಲಿ ಮೊಗೇರ ಗೇಟ್ ವೇ ನಿಂದ ಸ್ವಾತಂತ್ರ್ಯ ದಿನಾಚರಣೆ 

0

ಪುತ್ತೂರು: ಬೆಳಿಯೂರುಕಟ್ಟೆ ಮೊಗೇರ ಗೇಟ್ ವೇ ಇದರ ಆಶ್ರಯದಲ್ಲಿ ಸೀತಾ ಪನೆತ್ತಡ್ಕದಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ವಿಜೃಂಭಣೆ ಹಾಗೂ ಶ್ರದ್ಧಾ-ಭಕ್ತಿಗಳಿಂದ ಆಚರಿಸಲಾಯಿತು.

​ಬೆಳಿಗ್ಗೆ  ಸುಂದರ ಸಾರ್ಯ, ಪೊವಪ್ಪ ಪೂಜಾರಿ ಪನೆತ್ತಡ್ಕ ಹಾಗೂ ಗ್ರಾಮದ ಹಿರಿಯರ ಉಪಸ್ಥಿತಿಯಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ತದನಂತರ ಬಾಬು ಕೆರೆಮೂಲೆ ಹಾಗೂ ಆಗಮಿಸಿದ ಮುಖ್ಯ ಅತಿಥಿಗಳು ದೀಪ ಪ್ರಜ್ವಲಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು.

​ಪ್ರಣನ್ಯ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಸಭಾ ಕಾರ್ಯಕ್ರಮದಲ್ಲಿ, ಚಂದ್ರವತಿ ಬಂಡಾರಿಕೆರೆ ಅವರು ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ಮತ್ತು ದೇಶಪ್ರೇಮದ ಕುರಿತು ಪ್ರಾಸಂಗಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸುಂದರ ಸಾರ್ಯ ಅವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ಸಮಾರಂಭದ ಕೊನೆಯಲ್ಲಿ ಎಲ್ಲರಿಗೂ ಸಿಹಿ ತಿಂಡಿ ವಿತರಿಸಿದರು.

​ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದ್ದ ಚಿತ್ರಕಲೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲರಿಗೂ ವಿಜಯ ಅಶೋಕ್ ಬಂಡಾರಿಕೆರೆ ಅವರ ಕಡೆಯಿಂದ ಬೆಳಗಿನ ಉಪಹಾರ ಹಾಗೂ ಚಹಾ ವ್ಯವಸ್ಥೆ ಮಾಡಲಾಗಿತ್ತು.

​ಕಾರ್ಯಕ್ರಮದಲ್ಲಿ ಅತಿಥಿಗಳಾಗಿ  ಪೂವಪ್ಪ ಪೂಜಾರಿ, ಚಂದ್ರವತಿ ಬಂಡಾರಿಕೆರೆ, ಫಕೀರ ಬಂಡಾರಿಕೆರೆ, ವಿಜಯ ಬಂಡಾರಿಕೆರೆ ಉಪಸ್ಥಿತರಿದ್ದರು.

​ಉಮೇಶ್ ಬಂಡಾರಿಕೆರೆ ಅವರು ಇಡೀ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು. ಊರಿನ ಹಿರಿಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

LEAVE A REPLY

Please enter your comment!
Please enter your name here