







ಕರ್ನೂರು: ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ನೆಟ್ಟಣಿಗೆ ಮುಡ್ನೂರು ಕರ್ನೂರು ಇಲ್ಲಿ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಕಾರ್ಯಕ್ರಮವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಬಿ.ಎಚ್ ಸೂಫಿ ನೆರವೇರಿಸಿದರು.


80ನೇ ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ ಕರ್ನೂರು ಶಾಲೆಯಲ್ಲಿ ಸುಮಾರು 35 ವರ್ಷಗಳ ಕಾಲ ಮುಖ್ಯ ಶಿಕ್ಷಕರಾಗಿ ಕರ್ತವ್ಯವನ್ನು ನಿರ್ವಹಿಸಿದ ಪದ್ಮನಾಭ ರೈ ಎಂ ಬೆದ್ರಾಡಿ ಅವರಿಗೆ “ಪದ್ಮ ಸೌರಭ” ಎಂಬ ಹೆಸರಿನಲ್ಲಿ ಅಭಿನಂದನೆ ಸಲ್ಲಿಸಿ ಗೌರವಿಸಲಾಯಿತು.ಮುಖ್ಯ ಅತಿಥಿಗಳಾಗಿ ಪಂಚಾಯತ್ ಸದಸ್ಯ ಶ್ರೀರಾಮ್ ಪಕ್ಕಳ, ಹಿರಿಯರಾದ ನಾರಾಯಣ ರೈ ಪತ್ತಾಯ, ಗೋಳಿತೊಟ್ಟು ಶಾಲೆಯ ನಿವೃತ್ತ ಮುಖ್ಯ ಗುರು ಸೀನಪ್ಪ ನಾಯ್ಕ್, ಗೋಳಿದಡಿ ಶಾಲೆಯ ನಿವೃತ್ತ ಮುಖ್ಯ ಗುರು ಕುಞಿರಾಮ, ಪಂಚಿ ಕಲ್ಲು ಶಾಲೆಯ ನಿವೃತ್ತ ಮುಖ್ಯ ಗುರು ಮಹಾಬಲ ರೈ, ಕೈಕಾರ ಶಾಲೆಯ ಮುಖ್ಯ ಗುರು ರಾಮಣ್ಣ ರೈ ಕರ್ನೂರು, ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೀರ್ತನ್ ಆಚಾರ್ಯ ಕರ್ನೂರು ಮಠ ಉಪಸ್ಥಿತರಿದ್ದರು.ಶಾಲಾ ಮುಖ್ಯ ಗುರು ರಮೇಶ್ ಶಿರ್ಲಾಲ್ ಎಲ್ಲರನ್ನು ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ನೀಡಲಾಯಿತು.ಶಿಕ್ಷಕಿ ಪ್ರವೀಣ ಕುಮಾರಿ ಸನ್ಮಾನ ಪತ್ರವನ್ನು ವಾಚಿಸಿದರು. ಲತಾ ರಮೇಶ್ ಮತ್ತು ಹಲೀಮ ನಜಿಮುನ್ನಿಸಾ ಕಾರ್ಯಕ್ರಮವನ್ನು ನಿರೂಪಿಸಿದರು. ಸಾವಿತ್ರಿ ಮತ್ತು ಅಸ್ಮ ಕೆ.ಪಿ ವಿಜೇತರ ಪಟ್ಟಿಯನ್ನು ವಾಚಿಸಿದರು. ಬಿಂದು ಮತ್ತು ಭವ್ಯ ಸಹಕರಿಸಿದರು. ವಿಜೇತ ಧನ್ಯವಾದ ಅರ್ಪಿಸಿದರು.ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಅತ್ಯಂತ ಅದ್ದೂರಿಯಾಗಿ ನಡೆಯಿತು.ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ ಯ ಉಪಾಧ್ಯಕ್ಷರು, ಸರ್ವ ಸದಸ್ಯರು, ಪೋಷಕರು, ಹಿರಿಯ ವಿದ್ಯಾರ್ಥಿಗಳು, ಊರಿನ ವಿದ್ಯಾಭಿಮಾನಿಗಳು ಉಪಸ್ಥಿತರಿದ್ದರು.













