






ಪುತ್ತೂರು: ಕಾವು ಕಮಲಡ್ಕ ತರವಾಡು ಮನೆಯಲ್ಲಿ ನಾಗರ ಪಂಚಮಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಯಿತು.ತರವಾಡಿನ ನಾಗಬನದಲ್ಲಿ ಬೆಳಗ್ಗಿನಿಂದಲೇ ವಿಶೇಷ ಪೂಜೆ, ತಂಬಿಲ ನಡೆಯಿತು.


ಸರ್ಪದೇವರಿಗೆ ಹಾಲು, ಅರಶಿನ, ಕುಂಕುಮ, ಹೂವುಗಳನ್ನು ಅರ್ಪಿಸಿ ಭಕ್ತರು ಪ್ರಾರ್ಥನೆ ಸಲ್ಲಿಸಿದರು.ಹಿರಿಯರು, ಮಹಿಳೆಯರು, ಮಕ್ಕಳು ಸೇರಿದಂತೆ ಕುಟುಂಬದ ಸದಸ್ಯರು ಮತ್ತು ಊರಿನ ಭಕ್ತರು ಭಾಗವಹಿಸಿದ್ದರು. ಪೂಜೆಯ ಬಳಿಕ ಪ್ರಸಾದ ವಿತರಿಸಲಾಯಿತು.













