







ಕಬಕ: ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್, ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರು ಪುತ್ತೂರು ಘಟಕ, ಬ್ರದರ್ಸ್ ಹೆಲ್ಪ್ ಲೈನ್ ಅಜ್ಜಿನಡ್ಕ ಹಾಗೂ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ಲೀಜನ್ ಏರಿಯಾ ಎ ವತಿಯಿಂದ ಸರ್ಕಾರಿ ಪ್ರೌಢಶಾಲೆ ಕಬಕದಲ್ಲಿ ಆ.15ರಂದು ಸ್ವಾತಂತ್ರ್ಯೋತ್ಸವ ಪ್ರಯುಕ್ತ ನಡೆದ ಸಾಂಸ್ಕೃತಿಕ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ಇದೇ ಸಂದರ್ಭದಲ್ಲಿ ನಿವೃತ್ತ ಯೋಧ ಹವಾಲ್ದಾರ್ ಕೃಷ್ಣಯ್ಯ ಕೆ. ಅವರನ್ನು ಗೌರವಿಸಲಾಯಿತು.


ಶಾಲಾ SDMC ಅಧ್ಯಕ್ಷ ನಝೀರ್ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕಿ ಸುರೇಖಾ ಎಲ್ಲರನ್ನೂ ಸ್ವಾಗತಿಸಿದರು. ಸಾಮಾಜಿಕ ಕಾರ್ಯಕರ್ತೆ ವತ್ಸಲಾ ನಾಯಕ್ ಮುಖ್ಯ ಅತಿಥಿಯಾಗಿ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆಗಳನ್ನು ಹೇಳಿಕೊಟ್ಟರು.ವೇದಿಕೆಯಲ್ಲಿ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಕರ್ನಾಟಕ ರಾಜ್ಯ ಸಂಚಾಲಕರು ಹಾಗೂ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಪುತ್ತೂರು ಘಟಕದ ಅಧ್ಯಕ್ಷ ಡಾ. ಶಾಂತಾ ಪುತ್ತೂರು, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪುತ್ತೂರು ಲೀಜನ್ ಏರಿಯಾ ಎ ಅಧ್ಯಕ್ಷೆ ಸುಮಂಗಲ ಶೆಣೈ, ಸೀನಿಯರ್ ಚೇಂಬರ್ ಕೋಶಾಧಿಕಾರಿ ರೋಹಿಣಿ ಆಚಾರ್ಯ, ಸದಸ್ಯೆ ರತ್ನಾ ನಾಯರ್, SDMC ಸದಸ್ಯ ಜೈನುದ್ದೀನ್ ಉಪಸ್ಥಿತರಿದ್ದರು.ವಿಜ್ಞಾನ ಶಿಕ್ಷಕಿ ಸುಮಿತ್ರಾ ಅಭಿನಂದನಾ ಭಾಷಣ ಮಾಡಿದರು. ಆಂಗ್ಲ ಭಾಷಾ ಶಿಕ್ಷಕಿ ಯಶೋಧಾ ಸ್ಪರ್ಧಾ ವಿಜೇತರ ಪಟ್ಟಿ ಓದಿದರು. ಹಿಂದಿ ಶಿಕ್ಷಕ ಉದಯ ಎಸ್. ಮತ್ತು ಸಮಾಜ ವಿಜ್ಞಾನ ಶಿಕ್ಷಕಿ ಸ್ವಪ್ನ ಕಾರ್ಯಕ್ರಮಕ್ಕೆ ಸಹಕರಿಸಿದರು.ಬ್ರದರ್ಸ್ ಹೆಲ್ಪ್ ಲೈನ್ ಅಜ್ಜಿನಡ್ಕ ಅಧ್ಯಕ್ಷರು ಮತ್ತು ಸೀನಿಯರ್ ಚೇಂಬರ್ ಸದಸ್ಯ ಜಿ.ಎ. ಶಂಸುದ್ದೀನ್ ಅಜ್ಜಿನಡ್ಕ, ಪತ್ರಕರ್ತರು ಹಾಗೂ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ ಕರ್ನಾಟಕ ರಾಜ್ಯ ಸಂಚಾಲಕ ಜಯಾನಂದ ಪೆರಾಜೆ ಶುಭ ಹಾರೈಸಿದರು. ಸೀನಿಯರ್ ಚೇಂಬರ್ ಸದಸ್ಯರು ಹಾಗೂ ಕನ್ನಡ ಭಾಷಾ ಶಿಕ್ಷಕಿ ಡಾ. ಶಾಂತಾ ಪುತ್ತೂರು ಕಾರ್ಯಕ್ರಮ ನಿರೂಪಿಸಿದರು.













