ಶಿವಸದನದಲ್ಲಿ 80ನೆಯ ಸ್ವಾತಂತ್ರ್ಯೋತ್ಸವದ ಸಂಭ್ರಮದ ಆಚರಣೆ

0

ಪುತ್ತೂರು : ‘ಶಿವಸದನ’, ಹಿರಿಯ ನಾಗರಿಕರ ಹಾಗೂ ವಿಶೇಷ ಚೇತನರ ವಸತಿ ನಿಲಯ, ಮುರ, ಪುತ್ತೂರು ಇಲ್ಲಿಯ ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನ ಶಾಲೆಯ ಮಕ್ಕಳೊಂದಿಗೆ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಶಿವಸದನ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷೆ ಶ್ರೀಮತಿ ಸುಮಂಗಲ ಪ್ರಭಾಕರ್ ಧ್ವಜಾರೋಹಣಗೈದು ಸಂದೇಶ ನೀಡಿದರು.
ಬಳಿಕ, ಸಾಮೂಹಿಕವಾಗಿ ರಾಷ್ಟ್ರಗೀತೆ, ವಂದೇ ಮಾತರಂ, ದೇಶ ಭಕ್ತಿ ಗೀತೆಗಳನ್ನು ಹಾಡಲಾಯಿತು. ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ, ಬಲಿದಾನ ಮಾಡಿದ ಮಹನೀಯರ ವೇಷ ಧರಿಸಿ, ಮಕ್ಕಳು ತಮ್ಮ ಸುಂದರ ಅಭಿನಯ ಹಾಗೂ ಭಾಷಣದಿಂದ ಅವರಿಗೆ ಗೌರವ ನಮನವನ್ನು ಸಲ್ಲಿಸಿದರು.

ವಿಶೇಷ ಶಾಲೆಯ ಶಿಕ್ಷಕಿಯರು ಮತ್ತು ಹಿರಿಯ ನಾಗರಿಕರ ನಿಲಯದ ನಿವೃತ್ತ ಶಿಕ್ಷಕಿಯರು ಕಾರ್ಯಕ್ರಮ ನಿರ್ವಹಿಸಿದರು . ಶ್ರೀಮತಿ ರೇಖಾ ಕಾರ್ಯಕ್ರಮ ನಿರೂಪಣೆ ಮಾಡಿದರೆ, ಶ್ರೀಮತಿ ಶಿಲ್ಪಾ ಟೀಚರ್ ಅತಿಥಿಗಳನ್ನು ಸ್ವಾಗತಿಸಿ, ಶ್ರೀಮತಿ ಭವಾನಿ ಟೀಚರ್ ರಾಷ್ಟ್ರ ನಾಯಕರ ಪರಿಚಯ ಮಾಡಿ, ಶ್ರೀಮತಿ ಅಮಿತಾ ಟೀಚರ್ ವಂದನಾರ್ಪಣೆ ಗೈದರು.

ಟ್ರಸ್ಟಿನ ಕಾರ್ಯದರ್ಶಿ ಕರುಣಾಕರ್ ಬೆಳ್ಳೆ, ಕೋಶಾಧಿಕಾರಿ ಶ್ರೀ ದಿನಕರ್ ರಾವ್ , ಸದಸ್ಯರಾದ ಶ್ರೀಚೇತನ್ ಶರ್ಮಾ,ಶ್ರೀ ಸಂತೋಷ್ ಕುಮಾರ್ ಉಜ್ಜೋಡಿ, ಶ್ರೀ ಸಾಯಿ ಪ್ರಸಾದ್, ಶ್ರೀಮತಿ ಗಾಯತ್ರಿ ಪಿಲಿಂಜ, ಶ್ರೀಮತಿ ವನಿತಾ ರಾವ್ ಹಾಗೂ ಪುತ್ತೂರಿನ ಬಂಧುಗಳು, ಮಕ್ಕಳ ಪೋಷಕರು, ಮ್ಯಾನೇಜರ್ ,ಸಿಬ್ಬಂದಿ ವರ್ಗದವರು,ಅಕ್ಕನವರು ಹಾಗೂ ಅತಿಥಿಗಳ ಸಹಕಾರದಿಂದ ಕಾರ್ಯಕ್ರಮವು ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here