ನೆಲ್ಯಾಡಿ ವಲಯ ಬಂಟರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

0

ಗೌರವಾಧ್ಯಕ್ಷ: ಸುಂದರ ಶೆಟ್ಟಿ ಪುರ, ಅಧ್ಯಕ್ಷ: ವಿಶ್ವನಾಥ ಶೆಟ್ಟಿ ಶ್ರೀಮಾತ, ಕಾರ್ಯದರ್ಶಿ; ಅನಿಲ್ ರೈ, ಕೋಶಾಧಿಕಾರಿ; ಪ್ರವೀಣ್ ಭಂಡಾರಿ

ನೆಲ್ಯಾಡಿ: ನೆಲ್ಯಾಡಿ ವಲಯ ಬಂಟರ ಸಂಘದ ಗೌರವಾಧ್ಯಕ್ಷರಾಗಿ ಸುಂದರ ಶೆಟ್ಟಿ ಪುರ, ಅಧ್ಯಕ್ಷರಾಗಿ ವಿಶ್ವನಾಥ ಶೆಟ್ಟಿ ಶ್ರೀಮಾತ, ಕಾರ್ಯದರ್ಶಿಯಾಗಿ ಅನಿಲ್ ರೈ ಹಾರ್ಪಳ ಹಾಗೂ ಕೋಶಾಧಿಕಾರಿಯಾಗಿ ಪ್ರವೀಣ್ ಭಂಡಾರಿ ಪುರ ಆಯ್ಕೆಯಾಗಿದ್ದಾರೆ.


ಆ.3ರಂದು ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಕ್ಷೀರ ಸಂಗಮ ಸಭಾಂಗಣದಲ್ಲಿ ನಿರ್ಗಮನ ಅಧ್ಯಕ್ಷ ಪ್ರತಾಪ್‌ಚಂದ್ರ ರೈ ಕುದ್ಮಾರುಗುತ್ತು ಅವರ ಅಧ್ಯಕ್ಷತೆಯಲ್ಲಿ ನಡೆದ ನೆಲ್ಯಾಡಿ ವಲಯ ಬಂಟರ ಸಂಘದ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.


ಸಂಚಾಲಕರಾಗಿ ಪ್ರತಾಪ್‌ಚಂದ್ರ ರೈ ಕುದ್ಮಾರುಗುತ್ತು, ಸಹ ಸಂಚಾಲಕರಾಗಿ ರಮೇಶ್ ಶೆಟ್ಟಿ ಬೀದಿ, ಉಪಾಧ್ಯಕ್ಷರಾಗಿ ಯಾದವ ಶೆಟ್ಟಿ ರಾಮನಗರ, ಜಯಾನಂದ ಶೆಟ್ಟಿ ಸೌಜನ್ಯ, ಐತ್ತಪ್ಪ ಶೆಟ್ಟಿ ಡೆಮ್ಮೆಜಾಲು, ವಿನೋದ್ ಶೆಟ್ಟಿ ಬಾಕಿಜಾಲು, ಸಹ ಕಾರ್ಯದರ್ಶಿಗಳಾಗಿ ವಿಶಾಲಾಕ್ಷಿ ಕಡೆಂಬಿಲ, ಅಮಿತಾ ಕಂಚಿನಡ್ಕ, ಸದಸ್ಯರಾಗಿ ಕೆ.ಪದ್ಮನಾಭ ಶೆಟ್ಟಿ, ಜಗನ್ನಾಥ ರೈ ಅರಂತಬೈಲು ಪಾದೆ, ಭಾಸ್ಕರ ರೈ ತೋಟ, ಪ್ರತೀಕ್ಷ್ ರೈ ಕೊಣಾಲುಗುತ್ತು, ಜೀವಿತಾಚಂದ್ರಶೇಖರ್ ಶೆಟ್ಟಿ ಗೋಳಿತ್ತೊಟ್ಟು, ಮಹಾಬಲ ಶೆಟ್ಟಿ ದೊಂತಿಲ, ರವಿಪ್ರಸಾದ್ ಶೆಟ್ಟಿ ಕೂರಟ, ಬಾಲಕೃಷ್ಣ ರೈ ಗುತ್ತು, ಚಂದ್ರಶೇಖರ್ ರೈ ರಾಮನಗರ, ರೇಷ್ಮಾ ಶೆಟ್ಟಿ ಗುತ್ತು, ಗಿರೀಶ್ ಶೆಟ್ಟಿ ಬೀದಿ, ಚಂದ್ರಶೇಖರ್ ಶೆಟ್ಟಿ ಪಟ್ಟೆ, ಪ್ರಹ್ಲಾದ್ ಶೆಟ್ಟಿ ಕೊಲ್ಯೊಟ್ಟು, ನಮಿತಾ ಶೆಟ್ಟಿ ನಡುಪರಾರಿ, ನಿತ್ಯಾನಂದ ಶೆಟ್ಟಿ ಮನವಳಿಕೆ ಅವರು ಆಯ್ಕೆಯಾದರು. ಕಾರ್ಯಕ್ರಮದಲ್ಲಿ ಹಿಂದಿನ ಅವಧಿಯ ಗೌರವಾಧ್ಯಕ್ಷ ವಿಶ್ವನಾಥ ಶೆಟ್ಟಿ ಶ್ರೀಮಾತ, ಕಾರ್ಯದರ್ಶಿ ಮಹಾಬಲ ಶೆಟ್ಟಿ ದೊಂತಿಲ, ತಾಲೂಕು ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ಮನವಳಿಕೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here