ದಿ. ದಿವಾಕರ ಪೂಜಾರಿ ಕೊಳೆಂಜಿಲಡ್ಡರಿಗೆ ನುಡಿನಮನ

0

ಉಪ್ಪಿನಂಗಡಿ: ಹುಟ್ಟು ಆಕಸ್ಮಿಕ, ಸಾವು ನಿಶ್ಚಿತ. ಆ ನಡುವಿನ ಬದುಕಿನ ನೆನಪುಗಳೇ ಶಾಶ್ವತ. ದಿವಾಕರ ಪೂಜಾರಿ ಕೊಳೆಂಜಿಲಡ್ಡರವರು ಇಂದು ನಮ್ಮನ್ನಗಲಿದ್ದರೂ ಅವರ ಮಾನವೀಯ ಸೇವೆಗಳು, ಮೌಲ್ಯಯುತ ಬದುಕಿನ ನೆನಪುಗಳು ಎಲ್ಲರ ಹೃದಯದಲ್ಲಿ ಶಾಶ್ವತವಾಗಿ ಇರಲಿದೆ ಎಂದು ಕಾಂಗ್ರೆಸ್ ಮುಖಂಡ ಉಲ್ಲಾಸ್ ಕೋಟ್ಯಾನ್ ತಿಳಿಸಿದರು.]


ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದಲ್ಲಿ ನಡೆದ ದಿ. ದಿವಾಕರ ಪೂಜಾರಿ ಕೊಳೆಂಜಿಲಡ್ಡರವರ ಉತ್ತರ ಕ್ರಿಯೆ ಕಾರ್ಯಕ್ರಮದಲ್ಲಿ ಅವರಿಗೆ ನುಡಿನಮನ ಸಲ್ಲಿಸಿ ಮಾತನಾಡಿದ ಅವರು, ಕೃಷಿಕನಾಗಿದ್ದುಕೊಂಡು ಅವರು ಸಹಕಾರಿ ಕ್ಷೇತ್ರ, ಧಾರ್ಮಿಕ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದವರು. ಉದಾರತೆ ಹಾಗೂ ಕರುಣೆಯಿಂದ ಅಸಂಖ್ಯಾತ ಜನರ ಹೃದಯವನ್ನು ಸ್ಪರ್ಶಿಸಿದವರು ಎಂದರು.


ಕಾರ್ಯಕ್ರಮದಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾಕ್, ಸದಸ್ಯ ದೇವಿದಾಸ್ ರೈ, ೩೪ ನೆಕ್ಕಿಲಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷರಾದ ಅಸ್ಕರ್ ಅಲಿ, ಸುಜಾತ ರೈ ಅಲಿಮಾರ್, ಪ್ರಮುಖರಾದ ಜೆರಾಲ್ಡ್ ಮಸ್ಕರ‍್ಹೇನಸ್, ದಿವಾಕರ ಆಚಾರ್ಯ, ಮೃತರ ಪತ್ನಿ ಜಯಶ್ರೀ, ಪುತ್ರರಾದ ಅಭಿನವ್ ಡಿ.ಜೆ., ಅಭಿಜಿತ್ ಡಿ.ಜೆ., ಪುತ್ರಿ ಅರ್ಪಿತಾ ಡಿ.ಜೆ., ಸೊಸೆಯಂದಿರಾದ ಕಾವ್ಯ, ರಕ್ಷಾ, ಅಳಿಯ ಪ್ರವೀಣ್ ಹಾಗೂ ಕುಟುಂಬಸ್ಥರು, ಬಂಧು- ಮಿತ್ರರು ಉಪಸ್ಥಿತ

LEAVE A REPLY

Please enter your comment!
Please enter your name here