







ಪುತ್ತೂರು: ತಾಂತ್ರಿಕ ಶಿಕ್ಷಣ ಮತ್ತು ಉದ್ಯೋಗ ತರಬೇತಿ ಕ್ಷೇತ್ರದಲ್ಲಿ ಪ್ರತಿಷ್ಠಿತ ಹೆಸರಾಗಿರುವ ನೆಟ್ಟೂರು ಟೆಕ್ನಿಕಲ್ ಟ್ರೈನಿಂಗ್ ಫೌಂಡೇಶನ್ ಯುವಜನತೆಗಾಗಿ ‘ಕಲಿಯುತ್ತಾ ಗಳಿಸಿ’ ಉದ್ಯೋಗಾಧಾರಿತ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದೆ.


ಎಲ್ಇಜಿಎಸ್ (Learn, Earn, grow, success) ಕಾರ್ಯಕ್ರಮದಡಿಯಲ್ಲಿ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೈಗಾರಿಕಾ ತರಬೇತಿಯೊಂದಿಗೆ ರಾಷ್ಟ್ರೀಯ ಮಾನ್ಯತೆ ಪಡೆದ ಡಿಪ್ಲೋಮಾ ಪ್ರಮಾಣಪತ್ರ ಪಡೆಯಲು ಅವಕಾಶ ಕಲ್ಪಿಸಲಾಗಿದೆ.



ವಾರದಲ್ಲಿ 5 ದಿನಗಳು ಕೈಗಾರಿಕಾ ತರಬೇತಿ (ಪ್ರಾಯೋಗಿಕ ಕೆಲಸ) ಹಾಗೂ 1 ದಿನ ತರಬೇತಿ ಕೇಂದ್ರದಲ್ಲಿ ಥಿಯರಿ ತರಗತಿಗಳು ನಡೆಯಲಿವೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ಸ್ಟೈಫಂಡ್ ರೂ. 15,000/- ದಿಂದ ರೂ. 17,000/- ವರೆಗೆ ಸಿಗಲಿದೆ.
ಸಮವಸ್ತ್ರ ,ಸೇಫ್ಟಿ ಶೂ ಮತ್ತು PPE ( personal protective equipment) ಕಿಟ್ ಮತ್ತು 1 ಲಕ್ಷ ರೂ ಆರೋಗ್ಯ ರಕ್ಷಣೆ ಮತ್ತು 7.5 ಲಕ್ಷ ರೂ ವೈಯಕ್ತಿಕ ಅಪಘಾತ ವಿಮೆಯು ಸಿಗಲಿದೆ. ಮಾತ್ರವಲ್ಲದೆ ಕೆಲಸದ ಅವಧಿಯಲ್ಲಿ ಸಬ್ಸಿಡಿ ದರದಲ್ಲಿ ಕ್ಯಾಂಟೀನ್ ಸೌಲಭ್ಯ, ತಿಂಗಳಿಗೆ 1 ಕ್ಯಾಶುಯಲ್ ರಜೆ (CL) ಮತ್ತು ಹಬ್ಬದ ರಜಾ ಸೌಲಭ್ಯಗಳು ಇದೆ. ಕೋರ್ಸ್ ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಉದ್ಯೋಗಾವಕಾಶಕ್ಕೆ ನೆರವು ನೀಡಲಾಗುವುದು.
ಅರ್ಹತಾ ಮಾನದಂಡಗಳು:
10ನೇ ತರಗತಿ ಉತ್ತೀರ್ಣ, 12ನೇ ತರಗತಿ ಅಥವಾ ಐಟಿಐ (1 ವರ್ಷ ಮತ್ತು 2 ವರ್ಷಗಳ ಎಲ್ಲಾ ಟ್ರೇಡ್ಗಳು/ spot selection.
ವಯೋಮಿತಿ: 18 ರಿಂದ 24 ವರ್ಷ
ನೇರ ಸಂದರ್ಶನ: ಶನಿವಾರ 22 ಆಗಸ್ಟ್ 2026 ( ಬೆಳಿಗ್ಗೆ 11 ರಿಂದ) ಸ್ಥಳ: ಪ್ರಗತಿ ಸ್ಟಡಿ ಸೆಂಟರ್, 2ನೇ ಮಹಡಿ, ಶ್ರೀ ಧರ್ಮಸ್ಥಳ ಬಿಲ್ಡಿಂಗ್, ಮೇನ್ ರೋಡ್, ಪುತ್ತೂರು.









