







ಪುತ್ತೂರು: ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಕಲ್ಲಾರೆ ಮತ್ತು ವಿಶ್ವಹಿಂದು ಪರಿಷತ್ ಮಾತೃ ಮಂಡಳಿ ಪುತ್ತೂರು ಇದರ ವತಿಯಿಂದ ವರ್ಷಂಪ್ರತಿಯಂತೆ 52ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ಆ.21ರಂದು ಕಲ್ಲಾರೆ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ಕಲಾ ಮಂಟಪದಲ್ಲಿ ನಡೆಯಲಿದೆ.


ಬೆಳಿಗ್ಗೆ ಗಂಟೆ 10.30ಕ್ಕೆ ಕಲಶ ಪ್ರತಿಷ್ಠೆ, ಸಂಕಲ್ಪ, 11 ಗಂಟೆಗೆ ಲಲಿತ ಸಹಸ್ರನಾಮ ಬಳಿಕ ತಿರುಪತಿ ತಿರುಮಲ ಟ್ರಸ್ಟ್ ಬೊಳುವಾರು ಇವರಿಂದ ಭಜನೆ, ಮಧ್ಯಾಹ್ನ ಗಂಟೆ 12ಕ್ಕೆ ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದೆ. ಪೂಜೆ ಮಾಡಿಸುವ ಭಕ್ತರು ಸೇವಾ ರಶೀದಿಯನ್ನು ಪಡೆಯುವಂತೆ ಸಂಘಟಕರು ತಿಳಿಸಿದ್ದಾರೆ.













