







ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಪುತ್ತೂರು, ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ(ಸಿ.ಎಲ್.ಸಿ) ಪುತ್ತೂರು, ಮಾಯಿದೆ ದೇವುಸ್ ಚರ್ಚ್ ಆರೋಗ್ಯ ಆಯೋಗ ಪುತ್ತೂರು, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಮಂಗಳೂರು ಹಾಗೂ ಇಂಡಿಯನ್ ಕ್ಯಾನ್ಸರ್ ಸೊಸೈಟಿ ಮಂಗಳೂರು ಇವುಗಳ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ಮತ್ತು ಕ್ಯಾನ್ಸರ್ ತಪಾಸಣಾ ಶಿಬಿರವು ಆ.23 ರಂದು ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ನಡೆಯಲಿದೆ.
ಲಭ್ಯವಿರುವ ವೈದ್ಯಕೀಯ ಸೇವೆಗಳು:
ಆರೋಗ್ಯ ತಪಾಸಣಾ ಶಿಬಿರದಲ್ಲಿ ಲಭ್ಯವಿರುವ ವೈದ್ಯಕೀಯ ಸೇವೆಗಳಾದ ಮೆಡಿಸಿನ್ ವಿಭಾಗ, ಚರ್ಮ ರೋಗ ವಿಭಾಗ, ಸ್ತ್ರೀ ರೋಗ ತಜ್ಞರ ವಿಭಾಗ, ಕ್ಯಾನ್ಸರ್ ರೋಗದ ಮಾಹಿತಿ, ಶಸ್ತ್ರ ಚಿಕಿತ್ಸಾ ತಜ್ಞರ ವಿಭಾಗ, ಕಿವಿ, ಮೂಗು, ಗಂಟಲು ವಿಭಾಗ, ಮಕ್ಕಳ ತಜ್ಞರ ವಿಭಾಗ, ಮೂಳೆ ತಜ್ಞರ ವಿಭಾಗ, ಕಿವಿ ಮತ್ತು ಶ್ರವಣ ವಿಭಾಗ, ಉಚಿತ ಕ್ಯಾನ್ಸರ್ ತಪಾಸಣೆ, ನೇತ್ರಾ ವಿಭಾಗ(ರಿಯಾಯಿತಿ ದರದಲ್ಲಿ ಕನ್ನಡಕ ನೀಡಲಾಗುವುದು), ಮಹಿಳೆಯರಿಗೆ ಉಚಿತ ಪ್ಯಾಪ್ ಸ್ಕೀಯರ್ ತಪಾಸಣೆ ನಡೆಸಲಾಗುತ್ತದೆ.
ಆರೋಗ್ಯ ಫಲಾನುಭವಿಗಳು ಈ ಆರೋಗ್ಯ ಶಿಬಿರದಲ್ಲಿ ಭಾಗಿಯಾಗಿ ಸೂಕ್ತ ತಪಾಸಣೆಯನ್ನು ಮಾಡಬೇಕಾಗಿ ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ಹಾಗೂ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ ನಿರ್ದೇಶಕ ವಂ|ಡಾ|ಜೆ.ಬಿ ಸಲ್ದಾನ್ಹಾ ಹಾಗೂ ಕ್ರಿಶ್ಚಿಯನ್ ಲೈಫ್ ಕಮ್ಯೂನಿಟಿ ಅಧ್ಯಕ್ಷ ವಿಲಿಯಂ ನೊರೋನ್ಹಾರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.















