ಡಾ. ಹಬೀಬ್‌ಗೆ ಯುನೈಟೆಡ್ ಕಿಂಗ್ಡಮ್‌ನ ಅಡ್ವಾನ್ಸ್ ಎಚ್‌ಇ ಸೀನಿಯರ್ ಫೆಲೋ ಗೌರವ

0

ಉಪ್ಪಿನಂಗಡಿ: ಡಾ. ಹಬೀಬ್ ಉಪ್ಪಿನಂಗಡಿಯವರು ಯುನೈಟೆಡ್ ಕಿಂಗ್ಡಮ್‌ನ ಪ್ರತಿಷ್ಟಿತ ಅಡ್ವಾನ್ಸ್ ಎಚ್‌ಇ ಸೀನಿಯರ್ ಫೆಲೋ ಗೌರವಕ್ಕೆ ಭಾಜನರಾಗಿದ್ದಾರೆ.


ಉನ್ನತ ಶಿಕ್ಷಣ, ಶೈಕ್ಷಣಿಕ ನಾಯಕತ್ವ, ನವೀನ ಬೋಧನೆ, ಪಠ್ಯಕ್ರಮ ಅಭಿವೃದ್ಧಿ, ಗುಣಮಟ್ಟದ ಭರವಸೆ, ವಿದ್ಯಾರ್ಥಿಗಳ ಮಾರ್ಗದರ್ಶನ ಹಾಗೂ ಸಹೋದ್ಯೋಗಿಗಳ ವೃತ್ತಿಪರ ಅಭಿವೃದ್ಧಿಗೆ ನೀಡಿದ ನಿರಂತರ ಕೊಡುಗೆಯನ್ನು ಪರಿಗಣಿಸಿ ಡಾ. ಹಬೀಬ್ ಉಪ್ಪಿನಂಗಡಿಯವರಿಗೆ ಈ ಗೌರವ ನೀಡಲಾಗಿದೆ.


ಪ್ರಸಕ್ತ ಅವರು ಬಹರೈನ್‌ನ ಕಿಂಗ್ಡಮ್ ಯುನಿವರ್ಸಿಟಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಹಾಗೂ ಎಂಬಿಎ ಕಾರ್ಯಕ್ರಮ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿ ಕೇಂದ್ರಿತ ಕಲಿಕೆ, ಒಳಗೊಳ್ಳುವ ಶಿಕ್ಷಣ, ಸಂಶೋಧನಾ ಆಧಾರಿತ ಬೋಧನೆ ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ತಂತ್ರಜ್ಞಾನದ ಪರಿಣಾಮಕಾರಿ ಬಳಕೆಗೆ ನೀಡಿದ ಕೊಡುಗೆಯನ್ನು ಈ ಫೆಲೋಶಿಪ್ ಗುರುತಿಸಿದೆ.


ಡಾ. ಹಬೀಬ್ ನಿರ್ವಹಣೆ, ಶಿಕ್ಷಣ, ಕೃತಕ ಬುದ್ಧಿಮತ್ತೆ ಮತ್ತು ಸಾಂಸ್ಥಿಕ ಅಧ್ಯಯನಗಳಿಗೆ ಸಂಬಂಧಿಸಿದ ಹಲವಾರು ಸಂಶೋಧನಾ ಲೇಖನಗಳನ್ನು ಪ್ರತಿಷ್ಠಿತ ಅಂತರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಪ್ರಕಟಿಸಿದ್ದಾರೆ. ಈ ಸಾಧನೆಯು ಅವರ ಶೈಕ್ಷಣಿಕ ವೃತ್ತಿಜೀವನದ ಮಹತ್ವದ ಮೈಲಿಗಲ್ಲಾಗಿದೆ. ಅವರು ನಿವೃತ್ತ ಪೋಸ್ಟ್ ಮಾಸ್ಟರ್ ಯೂಸುಫ್ ಉಪ್ಪಿನಂಗಡಿ ಮತ್ತು ಆಯಿಶ ದಂಪತಿಯ ಪುತ್ರರಾಗಿದ್ದಾರೆ.

LEAVE A REPLY

Please enter your comment!
Please enter your name here