ಗೋಳಿತ್ತೊಟ್ಟು ಗ್ರಾ.ಪಂ.ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮಸಭೆ

0

ನೆಲ್ಯಾಡಿ: ಕಡಬ ತಾಲೂಕಿನ ಗೋಳಿತ್ತೊಟ್ಟು ಗ್ರಾ.ಪಂ.ನ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಹಾಗೂ ಕೇಂದ್ರ 15ನೇ ಹಣಕಾಸು ಮತ್ತು ರಾಜ್ಯ ಹಣಕಾಸು ಯೋಜನೆಯ 2026-27ನೇ ಸಾಲಿನ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮಸಭೆ ಆ.20ರಂದು ಬೆಳಗ್ಗೆ ಗ್ರಾ.ಪಂ.ಸಭಾಭವನದಲ್ಲಿ ನಡೆಯಿತು.


ಪುತ್ತೂರು ಕ್ಷೇತ್ರ ಸಮನ್ವಯ ಶಿಕ್ಷಣಾಧಿಕಾರಿ ನವೀನ್ ಸ್ಟೀಪನ್ ವೇಗಸ್ ಅಧ್ಯಕ್ಷತೆ ವಹಿಸಿ, ಅರ್ಹ ಫಲಾನುಭವಿಗಳು ಯೋಜನೆಯ ಬಗ್ಗೆ ಗ್ರಾ.ಪಂ.ನಿಂದ ಮಾಹಿತಿ ಪಡೆದುಕೊಂಡು ತಮ್ಮ ವೈಯಕ್ತಿಕ ಜಮೀನಿನಲ್ಲಿ ಅನುಷ್ಠಾನಗೊಳಿಸುವ ಮೂಲಕ ಸದುಪಯೋಗಪಡೆದುಕೊಳ್ಳಬಹುದು. ಅದೇ ರೀತಿ ಸಾರ್ವಜನಿಕ ಕೆಲಸಗಳನ್ನೂ ನಿರ್ವಹಿಸಬಹುದಾಗಿದೆ ಎಂದರು. ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕಿ ಪವಿತ್ರಾ ಶೆಟ್ಟಿ ಅವರು ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.

36.73 ಲಕ್ಷ ರೂ.ಖರ್ಚು:
ಗ್ರಾ.ಪಂ.ನಲ್ಲಿ ಏ.1, 2025ರಿಂದ ಮಾ.31, 2026ರ ತನಕದ 1 ವರ್ಷದ ಅವಧಿಯಲ್ಲಿ ಮಹಾತ್ಮಗಾಂಧಿ ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 123 ಕಾಮಗಾರಿ ನಡೆದಿದೆ. ಇದಕ್ಕೆ 33,07,060 ರೂ. ಕೂಲಿ ಹಾಗೂ 3,66,150 ರೂ.ಸಾಮಾಗ್ರಿ ವೆಚ್ಚ ಸೇರಿದಂತೆ 36,73,210 ರೂ.ಖರ್ಚು ಆಗಿದೆ. 203 ಕುಟುಂಬದ 372 ಮಂದಿ ಕೆಲಸ ನಿರ್ವಹಿಸಿದ್ದು 8938 ಮಾನವ ದಿನ ಸೃಜನೆಯಾಗಿದೆ ಎಂದು ಸಭೆಗೆ ಮಾಹಿತಿ ನೀಡಲಾಯಿತು.

15ನೇ ಹಣಕಾಸು;
ಏ.1, 2025ರಿಂದ ಮಾ.31, 2026ರ ತನಕದ 1 ವರ್ಷದ ಅವಧಿಯಲ್ಲಿ 15ನೇ ಹಣಕಾಸು ಯೋಜನೆ ಅನುದಾನದಲ್ಲಿ ಗ್ರಾ.ಪಂ.ನಿAದ 26 ಕಾಮಗಾರಿ ನಡೆದಿದ್ದು 18,95,896 ರೂ.ಖರ್ಚು ಮಾಡಲಾಗಿದೆ. ತಾ.ಪಂ.ನ 4,80,300 ರೂ.ಅನುದಾನದಲ್ಲಿ 1 ಕಾಮಗಾರಿ ನಡೆದಿದೆ. ರಾಜ್ಯ ಹಣಕಾಸು ಯೋಜನೆಯ 11,62,866 ರೂ. ಅನುದಾನದಲ್ಲಿ ತಾ.ಪಂ.ನ 5 ಕಾಮಗಾರಿಗಳು, 1,99,614 ರೂ.ಅನುದಾನದಲ್ಲಿ ಜಿ.ಪಂ.ನ 1 ಕಾಮಗಾರಿ ನಡೆದಿದೆ ಎಂದು ಮಾಹಿತಿ ನೀಡಲಾಯಿತು. ತಾಂತ್ರಿಕ ಸಹಾಯಕ ಮನೋಜ್‌ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ರಮ್ಯ, ಪ್ರಣಮ್ಯ, ಸವಿತಾ, ಪ್ರತಿಭಾ, ಜಯಮಣಿ ಅವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಪಿಡಿಒ ಲಲಿತಾ ಜಿ.ಡಿ.ಸ್ವಾಗತಿಸಿದರು. ಗ್ರಾ.ಪಂ.ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here