ಕೃಷ್ಣಗಿರಿ ಸರಕಾರಿ  ಹಿರಿಯ ಪ್ರಾಥಮಿಕ ಶಾಲೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವ

0

ಬಡಗನ್ನೂರುಃ ಕೃಷ್ಣಗಿರಿ ದ.ಕ.ಜಿ. ಪಂ  ಹಿರಿಯ ಪ್ರಾಥಮಿಕ ಶಾಲೆಯಲ್ಲಿ  80ನೇ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲಾ  ಎಸ್. ಡಿ. ಯಂ. ಸಿ ಅಧ್ಯಕ್ಷ ರಾಜೇಶ್ . ಎನ್ ರವರು ಧ್ವಜಾರೋಹಣವನ್ನು ನೆರವೇರಿಸಿದರು ಬಳಿಕ. ಭಾರತ ಮಾತೆಗೆ ದೀಪ ಬೆಳಗಿಸುವುದರ ಜೊತೆಗೆ ಪುಷ್ಪ ನಮನ ಸಲ್ಲಿಸಲಾಯಿತು.

.ಊರಿನ ಹಿರಿಯರಾದ ವಿಶ್ವನಾಥ ರೈ ಕೋಡಂದೂರು ರವರು ಸ್ವಾತಂತ್ರ್ಯೋತ್ಸವ ಬಗ್ಗೆ ಸಂಧರ್ಭೋಚಿತ ಮಾತನಾಡಿ  ಶುಭಾಶಯಗಳನ್ನು ಸಲ್ಲಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ  ಕೋಡಂದೂರು ಪುರಂದರ ಶೆಟ್ಟಿ ರವರು ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದ ವೀರರಿಗೆ ನುಡಿ ನಮನ ಸಲ್ಲಿಸಿದರು. 

ಕಾರ್ಯಕ್ರಮದಲ್ಲಿ ಸ್ಥಳೀಯರಾದ ಕೋಡಂದೂರು ಸುಬೋಧ್ ರೈ, ಎಸ್. ಡಿ. ಯಂ. ಸಿ ಉಪಾಧ್ಯಕ್ಷೆ ಜಯಂತಿ. ಎನ್, ಶಿಕ್ಷಕರಾದ  ಪ್ರಮಿತ, ಶೃತಿ, ಎಸ್ ಡಿ ಎಂ ಸಿ ಸದಸ್ಯರು,ಮಕ್ಕಳ  ಪೋಷಕರು, ಹಿರಿಯ ವಿದ್ಯಾರ್ಥಿಗಳು ಹಾಗೂ ಊರಿನವರು  ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ .ಶಾಲಾ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ಸಹ ಶಿಕ್ಷಕ ಆಂಜನೇಯ ಆಲದಕಟ್ಟಿ ಪ್ರಾಸ್ತಾವಿಕ ಮಾತನಾಡಿದರು.

ಪ್ರಭಾರ ಮುಖ್ಯ ಶಿಕ್ಷಕಿ ಜಯಶ್ರೀ ಎಂ ಸ್ವಾಗತಿಸಿ ವಂದಿಸಿದರು. 

LEAVE A REPLY

Please enter your comment!
Please enter your name here