






ಸರ್ಕಾರಿ ಶಾಲೆಗಳ ಉಳಿವಿಗೆ ಯುವ ಸಮೂಹದ ಸಹಕಾರ ಅಗತ್ಯ: ದಯಾನಂದ ಪಿಜಕ್ಕಳ


ಕಡಬ: ಯುವವಾಹಿನಿ (ರಿ.) ಕಡಬ ಘಟಕದ ವತಿಯಿಂದ 80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಪಿಜಕ್ಕಳ, ಪನ್ಯ–ಗುರಿಯಡ್ಕ, ಬಳ್ಪ ಹಾಗೂ ಎಣ್ಣೆಮಜಲು ಸರ್ಕಾರಿ ಶಾಲೆಗಳ ಮಕ್ಕಳಿಗೆ ಗುರುತಿನ ಚೀಟಿ (ಐಡಿ ಕಾರ್ಡ್) ವಿತರಿಸುವ ಕಾರ್ಯಕ್ರಮ ನಡೆಯಿತು.




ಕಾರ್ಯಕ್ರಮದಲ್ಲಿ ಮಾತನಾಡಿದ ಕಡಬ ಪಟ್ಟಣ ಪಂಚಾಯತ್ ಸದಸ್ಯ ದಯಾನಂದ ಪಿಜಕ್ಕಳ, ಸರ್ಕಾರಿ ಶಾಲೆಗಳ ಉಳಿವಿಗೆ ಯುವ ಸಮೂಹದ ಸಹಕಾರ ಅತ್ಯಗತ್ಯ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಮಕ್ಕಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಪೋಷಕರು ಹಾಗೂ ಮಕ್ಕಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಕಡಬ ಘಟಕದ ಅಧ್ಯಕ್ಷ ಉಮೇಶ್ ಬಳ್ಪ, ಪಟ್ಟಣ ಪಂಚಾಯತ್ ಸದಸ್ಯ ದಯಾನಂದ ಪಿಜಕ್ಕಳ, ಪುತ್ತೂರು ಬಿಲ್ಲವ ಮಹಿಳಾ ವೇದಿಕೆಯ ಉಪಾಧ್ಯಕ್ಷೆ ಶ್ವೇತಾ ಚಂದ್ರಶೇಖರ ಕುದುಂಬೂರು, ಕೇಂದ್ರ ಸಮಿತಿ ಪ್ರಚಾರ ನಿರ್ದೇಶಕ ಶಿವಪ್ರಸಾದ್ ನೂಚಿಲ, ಉಪಾಧ್ಯಕ್ಷೆ ಸರಿತಾ ಉಂಡಿಲ, ಘಟಕದ ನಿರ್ದೇಶಕರಾದ ಜಯಪ್ರಕಾಶ್ ದೋಳ ಹಾಗೂ ನೇತ್ರಾವತಿ ಬಳ್ಪ, ಘಟಕದ ಸದಸ್ಯೆ ಹರಿಣಾಕ್ಷಿ ಅಂಙನ ಸೇರಿದಂತೆ ಶಾಲಾ ಶಿಕ್ಷಕರು, ಸಿಬ್ಬಂದಿ ವರ್ಗ ಹಾಗೂ ಪೋಷಕರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಾಲೆಗಳ ಮಕ್ಕಳಿಗೆ ಗುರುತಿನ ಚೀಟಿಗಳನ್ನು ವಿತರಿಸಲಾಯಿತು. ಶಾಲಾ ಶಿಕ್ಷಕಿ ಧನ್ಯವಾದ ಸಮರ್ಪಿಸಿದರು.










