







ನೆಲ್ಯಾಡಿ: ಶ್ರೀ ಕ್ಷೇತ್ರ ಸೌತಡ್ಕ ಮಹಾಗಣಪತಿ ಸನ್ನಿಧಿಗೆ ಮಳೆಗಾಲದಲ್ಲಿ ಯಾತ್ರಾರ್ಥಿಗಳಿಗೆ ಬರಲು ಅನುಕೂಲವಾಗುವಂತೆ ಬ್ಯಾಂಕ್ ಆಫ್ ಬರೋಡಾ ವತಿಯಿಂದ 5 ಲಕ್ಷ ರೂ.ವೆಚ್ಚದಲ್ಲಿ ನೀಡಿದ ರೂಫಿಂಗ್ ಟ್ರಾಲಿಯನ್ನು ಆ.21ರಂದು ಲೋಕಾರ್ಪಣೆ ಮಾಡಲಾಯಿತು.



ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಬ್ಯಾಂಕ್ ಆಫ್ ಬರೋಡಾದ ಪುತ್ತೂರು ವಿಭಾಗದ ಎಜಿಎಂ ಯೋಗೀಶ್, ಆರ್ಒ ಭರತ್ ಶೆಟ್ಟಿ, ಶಾಖಾಧಿಕಾರಿ ಯೋಗೀಶ್, ಶಿಶಿಲ ಶಾಖಾ ಪ್ರಬಂಧಕ ರಾಜು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ ಸುಬ್ರಹ್ಮಣ್ಯ ಶಬರಾಯ, ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಸಮಿತಿ ಸದಸ್ಯರಾದ ಪ್ರಶಾಂತ್ ಮಚ್ಚಿನ, ವಿಶ್ವನಾಥ ಕೊಲ್ಲಾಜೆ, ಪ್ರಮೋದ್ ಕುಮಾರ್ ರೆಖ್ಯ, ಗಣೇಶ ಕಾಶಿ, ಲೋಕೇಶ್ವರಿ ವಿನಯಚಂದ್ರ, ಪ್ರಧಾನ ಅರ್ಚಕ ಸತ್ಯಪ್ರಿಯ ಕಲ್ಲೂರಾಯ, ಅರ್ಚಕರಾದ ಸುಬ್ರಹ್ಮಣ್ಯ ತೋಡ್ತಿಲ್ಲಾಯ, ಮಾಜಿ ಸದಸ್ಯರಾದ ಗಣೇಶ ಪಿ.ಕೆ., ಪ್ರಶಾಂತ್ ರೈ ಅರಂತಬೈಲು, ವಿಶ್ವನಾಥ ಶೆಟ್ಟಿ, ಹಾಗೂ ದೇವಳದ ಸಿಬ್ಬಂದಿಗಳು ಉಪಸ್ಥಿತರಿದ್ದರು.













