







ಪುಣಚ: ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಆ.22ರಂದು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಿತು. ಬೆಳಿಗ್ಗೆ ಬ್ರಹ್ಮಶ್ರೀ ವರ್ಕಾಡಿ ಗಣೇಶ ತಂತ್ರಿವರ್ಯರ ನೇತೃತ್ವದಲ್ಲಿ ಪ್ರಾರ್ಥನೆಯೊಂದಿಗೆ ಮಹಾಗಣಪತಿ ಹೋಮ, ಪಂಚ ವಿಂಶತಿ ಕಲಶ ನಡೆಯಿತು. ವೇದಮೂರ್ತಿ ಶಿಬರ ಶ್ರೀವತ್ಸ ಕೆದಿಲಾಯರ ಪೌರೋಹಿತ್ಯದಲ್ಲಿ ಪ್ರಾರ್ಥನೆ, ಶ್ರೀ ಸತ್ಯನಾರಾಯಣ ಪೂಜೆ ನೆರವೇರಿತು. ಮಧ್ಯಾಹ್ನ ಮಹಾಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು.



ಸಾವಿರಾರು ಭಕ್ತರ ಪಾಲ್ಗೊಳ್ಳುವಿಕೆ: ಕಾರ್ಯಕ್ರಮದಲ್ಲಿ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡರು.
ವಿಟ್ಲ ಅರಮನೆಯ ಅನುವಂಶಿಕ ಮೊಕ್ತೇಸರರಾದ ಬಂಗಾರ ಅರಸರು, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಳ,ಸಂಸದ ಕ್ಯಾ. ಬ್ರಿಜೇಶ್ ಚೌಟ,ಮಾಜಿ ಶಾಸಕ ಸಂಜೀವ ಮಠಂದೂರು ಸೇರಿದಂತೆ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಮಾರಪ್ಪ ಶೆಟ್ಟಿ ಬೈಲುಗುತ್ತು, ಗೌರವಾಧ್ಯಕ್ಷ ಎಸ್.ಆರ್.ರಂಗಮೂರ್ತಿ,ಪ್ರಧಾನ ಕಾರ್ಯದರ್ಶಿ ಉದಯ ಕುಮಾರ್ ದಂಬೆ, ಸಂಚಾಲಕ ಶ್ರೀಧರ ಶೆಟ್ಟಿ ದೇವರಗುಂಡಿ, ಉಪಾಧ್ಯಕ್ಷ ಜಯಂತ ಗೌಡ ಒ, ಕೋಶಾಧಿಕಾರಿ ಹರ್ಷ ಎ.ಎಸ್ ಏರಣಿಕಟ್ಟೆ, ಸಮಿತಿ ಸದಸ್ಯರಾದ ಶ್ರೀಕೃಷ್ಣ ಭಟ್ ಬರೆಂಗಾಯಿ,ವಿಶ್ವನಾಥ ರೈ ಪರಿಯಾಲು, ಗಿರೀಶ್ ಭಟ್ ತೋಟದಮೂಲೆ, ಜಗದೀಶ ಮಾರಮಜಲು, ಈಶ್ವರ ನಾಯ್ಕ ಬೇರಿಕೆ, ಕಾರ್ತಿಕ್ ಶಾಸ್ತ್ರಿ ಮಣಿಲ, ಹರೀಶ್ ಪಟಿಕಲ್ಲು, ಸಾತ್ವಿಕ್ ಶರವು ಸೇರಿದಂತೆ ಧಾರ್ಮಿಕ, ಶೈಕ್ಷಣಿಕ, ಸಂಘ ಸಂಸ್ಥೆಗಳ ಪ್ರಮುಖರುಗಳು, ಗ್ರಾಮಸ್ಥರು, ಊರ ಪರಊರ ಸಾವಿರಾರು ಮಂದಿ ಭಕ್ತಾದಿಗಳು ಪಾಲ್ಗೊಂಡು ಪ್ರಸಾದದೊಂದಿಗೆ ಅನ್ನಪ್ರಸಾದ ಸ್ವೀಕರಿಸಿದರು.













