ಉಪ್ಪಿನಂಗಡಿ: ಮನೆಯಂಗಳದಲ್ಲಿ ನಿಲ್ಲಿಸಿದ್ದ ಬೈಕ್‌ಗಳ ಕಳವು

0

ಉಪ್ಪಿನಂಗಡಿ: ಇಲ್ಲಿನ ಹಿರ್ತಡ್ಕ ಮನೆಯಂಗಳದಲ್ಲಿ ನಿಲ್ಲಿಸಲಾಗಿದ್ದ ಎರಡು ದ್ವಿಚಕ್ರ ವಾಹನಗಳನ್ನು ಕಳ್ಳರು ಕದ್ದೊಯ್ದ ಘಟನೆ ಅ.21 ರ ರಾತ್ರಿ ನಡೆದಿದೆ.


ಹಿರ್ತಡ್ಕ ನಿವಾಸಿ ಅಬ್ದುಲ್ ಅಜ್ಮಿ ಎಂಬವರ ಒಡೆತನದ ಕೆ.ಎ. 21 ಕೆ 8958 ನಂಬರ್‌ ನ ಹಿರೋ ಹೋಂಡಾ ಕಂಪೆನಿಯ ಫ್ಯಾಶನ್ ಪ್ರೋ ಬೈಕ್ ಹಾಗೂ ಕೆ.ಎ. 21 ಕೆ 6142 ನಂಬ್ರದ ಹಿರೋ ಹೋಂಡಾ ಕಂಪೆನಿಯ ಗ್ಲಾಮರ್ ಬೈಕ್ ಕಳವು ಆಗಿದ್ದು, ಮನೆಯ ಬಳಿಯ ಶೆಡ್ ನಲ್ಲಿ ಇರಿಸಲಾಗಿದ್ದ ಬೈಕ್ ಗಳನ್ನು ಯಾರೋ ಕಳ್ಳರು ಕದ್ದೊಯಿದ್ದಾರೆಂದು ಪೊಲೀಸರಿಗೆ ನೀಡಲಾದ ದೂರಿನಲ್ಲಿ ತಿಳಿಸಲಾಗಿದೆ. ಉಪ್ಪಿನಂಗಡಿ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here