ಪುತ್ತೂರು ಎಚ್‌ಪಿಆರ್‌ ನರ್ಸಿಂಗ್ ಕಾಲೇಜಿನಲ್ಲಿ ‘ಆಘೋಷಮ್ 2026’ ಓಣಂ ಸಂಭ್ರಮ

0

ಪುತ್ತೂರು: ಎಚ್‌ಪಿಆರ್‌ ಇನ್ಸಿಸ್ಟಿಟ್ಯೂಟ್‌ ಆಫ್‌ ನರ್ಸಿಂಗ್‌ ಆಂಡ್‌ ಪ್ಯಾರಮೆಡಿಕಲ್‌ ಸೈನ್ಸಸ್‌, ಪುತ್ತೂರು ವತಿಯಿಂದ “ಆಘೋಷಮ್‌ 2026” ಓಣಂ ಸಂಭ್ರಮಾಚರಣೆಯನ್ನು ಆಗಸ್ಟ್‌ 20ರಂದು ಪುತ್ತೂರು ಗಾರ್ಡನ್‌ನಲ್ಲಿ ಆಚರಿಸಲಾಯಿತು.

ಕಾರ್ಯಕ್ರಮವು ಮಹಾಬಲಿಯ ಸ್ವಾಗತ ಮೆರವಣಿಗೆಯೊಂದಿಗೆ ಆರಂಭಗೊಂಡಿತು. ಬಳಿಕ ಪೂಜಾ ವಿಧಿವಿಧಾನಗಳು, ತಿರುವಾತಿರ ನೃತ್ಯ ಪ್ರರ್ದಶನ ಮತ್ತು ವಿದ್ಯಾರ್ಥಿಗಳ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಸಂಭ್ರಮಕ್ಕೆ ಮೆರುಗು ತಂಡವು ಸಾಂಪ್ರದಾಯಿಕ ಓಣಂ ಸಾದ್ಯವನ್ನು ಆಯೋಜಿಸಲಾಗಿತ್ತು. ನಂತರ ವಿವಿಧ ಮನೋರಂಜನಾ ಹಾಗೂ ಕ್ರೀಡಾ ಸ್ಪರ್ದೆಗಳು ನಡೆದವು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಪ್ರಾಂಶುಪಾಲೆ ಇವ್ನೀಸ್‌ ಆಗ್ನೇಸ್‌  ಡಿಸೋಜಾ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕರ್ನಾಟಕ ಸ್ಟೂಡೆಂಟ್‌ ವೆಲ್ಫೇರ್‌ ಎಜುಕೇಷನ್‌ ಜೋಮ್ಜ್‌ ಟ್ರಸ್ಟ್‌ನ ಸಂಸ್ಥಾಪಕ ಹಾಗೂ ಅಧ್ಯಕ್ಷ ಜೋಮನ್‌ ಎಂ.ಜೆ ವಹಿಸಿದ್ದರು. ಕಾರ್ಯಕ್ರಮದ ಗೌರವ ಅತಿಥಿಯಾಗಿ ಸಿನಿಮಾ, ಧಾರಾವಾಹಿ ಹಾಗೂ ರಂಗಭೂಮಿ ಕಲಾವಿದ ಮತ್ತು ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ದಯಾನಂದ ಅಗಟ್ಟಾಡಿ ವಹಿಸಿದರು.

ಸಂಸ್ಥೆಯ ಉಪಪ್ರಾಂಶುಪಾಲೆ ಜಲಜಾ ಎಸ್.ಎ ಮತ್ತು ಕಾಲೇಜಿನ ವಿದ್ಯಾರ್ಥಿ ಪ್ರತಿನಿಧಿ ಶಾಹೀದ್‌ ಕಾರ್ಯಕ್ರಮದಲ್ಲಿ ಸಂಸ್ಥೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿನಿಯರಾದ ರಿನಾದ ಮತ್ತು ಅನ್ಸಿಫಾ ನಿರ್ವಹಿಸಿದರು.

LEAVE A REPLY

Please enter your comment!
Please enter your name here