






ಪುತ್ತೂರು: ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ಜರಗಿದ ದಕ್ಷಿಣ ಕನ್ನಡ ಜಿಲ್ಲಾ ಪ್ರಾರ್ಥಮಿಕ ಪ್ರೌಢಶಾಲಾ ಬಾಲಕ ಬಾಲಕಿಯರ ಬ್ಯಾಂಡ್ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ”ಶೇಷಾದ್ರಿ ಘೋಷ್ ಪತಕ” ತಂಡವು ಪ್ರಥಮ ಸ್ಥಾನವನ್ನು ಪಡೆದು ಮುಂದಿನ ಕೊಡಗಿನಲ್ಲಿ ನಡೆಯುವ ವಿಭಾಗ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತದೆ.
ಈ ತಂಡದಲ್ಲಿ ಸುಮಾರು 33 ವಿದ್ಯಾರ್ಥಿಗಳು ಭಾಗವಹಿಸಿ ಶಾಲೆಗೆ ಹೆಮ್ಮೆಯನ್ನು ತಂದಿರುತ್ತಾರೆ, ಈ ಸಂದರ್ಭದಲ್ಲಿ ಘೋಷ್ ಸಂಯೋಜಕರಾದ ಬಿ ವಿಜಯಕುಮಾರ್ ಮತ್ತು ಶಿಕ್ಷಕರಾದ ಚಂದ್ರಶೇಖರ್ ಸುಳ್ಯಪದವು ಉಪಸ್ಥಿತರಿದ್ದರು.


ಶಾಲಾ ಮುಖ್ಯೋಪಾಧ್ಯಾಯರಾದ ಆಶಾ ಬೆಳ್ಳಾರೆ ಮತ್ತು ನಳಿನಿ ಸಹಕರಿಸಿದರು.













