34ನೇ ವರ್ಷದ ಮಿಲಾದ್ ಸಮಾವೇಶ : ಪುತ್ತೂರಿನಲ್ಲಿ ಬೃಹತ್ ಕಾಲ್ನಡಿಗೆ ಜಾಥಾ-ಸಾವಿರಾರು ಮಂದಿ ಭಾಗಿ

0

ಪುತ್ತೂರು: ದ.ಕ.ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಪುತ್ತೂರು ಹಾಗೂ ಈದ್ ಮಿಲಾದ್ ಸಮಿತಿ ಪುತ್ತೂರು ತಾಲೂಕು ಇದರ ಜಂಟಿ ಆಶ್ರಯದಲ್ಲಿ 34ನೇ ವರ್ಷದ ಬೃಹತ್ ಮಿಲಾದ್ ಸಮಾವೇಶದ ಪ್ರಯುಕ್ತ ದರ್ಬೆ ಬೈಪಾನ್ ಬಳಿಯಿಂದ ಪುತ್ತೂರು ಕಿಲ್ಲೆ ಮೈದಾನದವರೆಗೆ ಇಸ್ಲಾಮಿಕ್ ಸಾಂಸ್ಕೃತಿಕ ಕಲೆಗಳನ್ನು ಬಿಂಬಿಸುವ ಅತ್ಯಾಕರ್ಷಕ ಕಾಲ್ನಡಿಗೆ ಜಾಥಾ ಆ.25ರಂದು ನಡೆಯಿತು.


ದರ್ಬೆ ಬೈಪಾಸ್ ಜಂಕ್ಷನ್ ಬಳಿಯಿಂದ ಹೊರಟು ಪ್ರಮುಖ ರಸ್ತೆಯಾಗಿ ಸಾಗಿದ ಈ ಕಾಲ್ನಡಿಗೆ ಜಾಥಾದಲ್ಲಿ ವಿವಿಧ ತಂಡಗಳಿಂದ ದಫ್ ಪ್ರದರ್ಶನ, ತಾಲೀಮು ಪ್ರದರ್ಶನ, ಅಲ್ಲದೆ ಇನ್ನಿತರ ವಿವಿಧ ಸಾಂಸ್ಕೃತಿಕ ಪ್ರದರ್ಶನ ಮೇಳೈಸಿತ್ತು. ಕಿಲ್ಲೆ ಮೈದಾನದವರೆಗೆ ನಡೆದ ಆಕರ್ಷಣೀಯ ಕಾಲ್ನಡಿಗೆ ಜಾಥಾದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ದರ್ಬೆಯಲ್ಲಿ ಕಾಲ್ನಡಿಗೆ ಜಾಥಾವನ್ನು ರಾಜ್ಯ ಎನ್ ಎಸ್ ಯು ಐ ಉಪಾಧ್ಯಕ್ಷ ಫಾರೂಕ್ ಬಯಬೆರವರು ಉದ್ಘಾಟಿಸಿದರು. ಬೆಂಗಳೂರು ರಾಯಲ್ ಗ್ರೂಪ್ಸ್ ನ ಹಾಜಿ ರಫೀಕ್ ಮತ್ತು ಸೌದಿ ಅರೇಬಿಯಾ ಪಿ.ಕೆ. ಗ್ರೂಪ್ಸ್‌ನ ಫೈರೋಝ್ ಪರ್ಲಡ್ಕ ರವರು ಧ್ವಜಾರೋಹಣಗೈದರು. ದುಬೈ ಉದ್ಯಮಿ ಶಾಕೀರ್ ಕೂರ್ನಡ್ಕ ರವರು ಧ್ವಜ ಸ್ವೀಕರಿಸಿದರು.


ದ. ಕ.ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ನ ರಾಜ್ಯ ಸಂಚಾಲಕ ನ್ಯಾಯವಾದಿ ಎಂ.ಪಿ ಅಬೂಬಕ್ಕರ್, ಅಧ್ಯಕ್ಷ ಹಾಜಿ ಅಶ್ರಫ್ ಕಲ್ಲೇಗ, ಪ್ರಧಾನ ಕಾರ್ಯದರ್ಶಿ ಬಶೀರ್ ಪರ್ಲಡ್ಕ, ಪುತ್ತೂರು ಈದ್ ಮಿಲಾದ್ ಸಮಿತಿಯ ಅಧ್ಯಕ್ಷ ಹನೀಫ್ ಬಗ್ಗು ಮೂಲೆ, ಪ್ರಧಾನ ಕಾರ್ಯದರ್ಶಿ ನೌಶಾದ್ ಹಾಜಿ ಬೊಳ್ವಾರ್, ಪುತ್ತೂರು ತಾಲೂಕು ಸಂಯುಕ್ತ ಖಾಝಿ ಸಮಿತಿಯ ಅಧ್ಯಕ್ಷ ಎಲ್. ಟಿ. ಅಬ್ದುಲ್ ರಝಾಕ್ ಹಾಜಿ, ದ.ಕ. ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ತಿನ ಕೋಶಾಧಿಕಾರಿ ಸಾಲ್ಮರ ಮುಹಮ್ಮದ್ ಶರೀಫ್ ಸಂಚಾಲಕ ನ್ಯಾಯವಾದಿ ನೋಟರಿ ನೂರುದ್ದೀನ್ ಸಾಲ್ಮರ, ಮತ್ತು ಖಾಸಿಮ್ ಹಾಜಿ ಮಿತ್ತೂರು, ಉಪಾಧ್ಯಕ್ಷ ಅಬೂಬಕ್ಕರ್ ಮುಲಾರ್, ಅಶ್ರಫ್ ಬಾವು ಪಡೀಲ್, ಮೂಸ ಕರೀಂ ಮಾಣಿ, ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿ ಅಧ್ಯಕ್ಷ ಅಬ್ದುಲ್ ರಹೀಮಾನ್ ಅಜಾದ್, ಎಸ್‌ಬಿ. ದಾರಿಮಿ ಹಾಗೂ ದ.ಕ. ಮುಸ್ಲಿಂ ಯುವಜನ ಪರಿಷತ್ತಿನ ಸದಸ್ಯರು ಹಾಗೂ ಈದ್ ಮಿಲಾದ್ ಸಮಿತಿಯ ಸದಸ್ಯರು ಸಾರ್ವಜನಿಕರು ವಿವಿಧ ಸಂಘ ಸಂಸ್ಥೆಗಳ ಪದಾಽಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.


ವಿವಿಧ ತಂಡಗಳ ದಫ್ ಪ್ರದರ್ಶನದೊಂದಿಗೆ ಪುತ್ತೂರು ಮುಖ್ಯ ರಸ್ತೆಯಾಗಿ ಕಿಲ್ಲೆ ಮೈದಾನದವರೆಗೆ ನಡೆದ ಜಾಥಾದಲ್ಲಿ ವಿವಿಧ ಕಡೆಗಳಿಂದ ಬಂದಿದ್ದ ಸಾವಿರಾರು ಮಂದಿ ಭಾಗಿಯಾಗಿದ್ದರು. ಪ್ರವಾದಿ ಮುಹಮ್ಮದ್ ಪೈಗಂಬರ್‌ರವರ ಕೀರ್ತನೆ, ಮದ್‌ಹ್‌ಗಾನ, ಸ್ವಲಾತ್, ಜಾಥಾದುದಕ್ಕೂ ಮೊಳಗಿತು. ಮಹಿಳೆಯರು ಮಕ್ಕಳು ಸೇರಿದಂತೆ ಸಾವಿರಾರು ಮಂದಿ ಜಾಥಾವನ್ನು ವೀಕ್ಷಿಸಿದರು.


ನಿರೀಕ್ಷೆಗೂ ಮೀರಿದ ಯಶಸ್ಸು- ಅಶ್ರಫ್ ಕಲ್ಲೇಗ:
34ನೇ ವರ್ಷದ ಬೃಹತ್ ಮಿಲಾದ್ ಸಮಾವೇಶ ಹಾಗೂ ದರ್ಬೆ ಪ್ರವಾಸಿ ಮಂದಿರದ ಬಳಿಯಿಂದ ನಡೆದ ಕಾಲ್ನಡಿಗೆ ಜಾಥಾ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿದೆ ವಿವಿಧ ಕಡೆಗಳಿಂದ ಸಾವಿರಾರು ಮಂದಿ ಭಾಗವಹಿಸಿ ಜಾಥಾ ಸುಸೂತ್ರವಾಗಿ ಮತ್ತು ಶಾಂತಿಯುತವಾಗಿ ನಡೆಯುವಂತೆ ಮಾಡಿದ್ದು ಭಾರೀ ಖುಷಿ ತಂದಿದೆ ಇದಕ್ಕಾಗಿ ಮುಸ್ಲಿಂ ಯುವಜನ ಪರಿಷತ್‌ಹಾಗೂ ಈದ್ ವಿಲಾದ್ ಸಮಿತಿಯವರಿಗೆ ಹಾಗೂ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುವುದಾಗಿ ದ.ಕ. ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ತಿನ ಅಧ್ಯಕ್ಷ ಅಶ್ರಫ್ ಕಲ್ಲೇಗರವರು ತಿಳಿಸಿದ್ದಾರೆ.


ಡಿವೈಎಸ್ಪಿ ಪ್ರಮೋದ್ ಕುಮಾರ್, ನಗರ ಪೊಲೀಸ್ ಠಾಣೆ ವೃತ ನಿರೀಕ್ಷಕ ಜಾನ್ಸನ್ ಡಿ’ಸೋಜರವರ ನೇತೃತ್ವದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.

ಕಣ್ಮನ ಸೆಳೆದ ದಫ್ ಪ್ರದರ್ಶನ
ದರ್ಬೆಯಿಂದ ಪುತ್ತೂರು ಮುಖ್ಯರಸ್ತೆಯಾಗಿ ಸಾಗಿದ ಜಾಥಾದಲ್ಲಿ ವಿವಿಧ ತಂಡಗಳ ದಫ್ ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ವಿವಿಧ ದಫ್ ತಂಡಗಳು ಹಾಗೂ ಸ್ಕೌಟ್ ತಂಡಗಳು, -ವರ್ ಶೋ ತಂಡ ವಿವಿಧ ಬಣ್ಣಗಳ ಸಮವಸಗಳ ಮೂಲಕ ಕಂಗೊಳಿಸುತ್ತಿತ್ತು. ದಫ್ ತಂಡ ಜಾಥಾದುದ್ದಕ್ಕೂ ನಿರಂತರವಾಗಿ ದಫ್ ಪ್ರದರ್ಶನ ನೀಡುತ್ತಲೇ ಸಾಗಿ ಬಂದದ್ದು ವಿಶೇಷವಾಗಿತ್ತು. ಪೊಲೀಸರ ಜೊತೆ ಮುಸ್ಲಿಂ ಯುವಜನ ಪರಿಷತ್ ಪದಾಧಿಕಾರಿಗಳು ಹಾಗೂ ವಿಲಾದ್ ಸಮಿತಿಯ ಪದಾಧಿಕಾರಿಗಳು ಜಾಥಾ ಸುಸೂತ್ರವಾಗಿ ಸಾಗುವಂತೆ ಮಾಡುವಲ್ಲಿ ಯಶಸ್ವಿಯಾದರು.

LEAVE A REPLY

Please enter your comment!
Please enter your name here